ಶಿವಮೊಗ್ಗ: ಬೆಂಗಳೂರಿನ ಬನನ್ನೇರುಘಟ್ಟ ರಸ್ತೆಯಲ್ಲಿ ರುವ ಫೋರ್ಟಿಸ್ ಆಸ್ಪತ್ರೆ ಶಿವಮೊಗ್ಗದ ಮೂವರಿಗೆ ಯಶಸ್ವಿ ಮೂಳಡ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಮೂಳೆ ರೋಗ ಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ!! ಪುಟ ಸ್ವಾಮಿ ಹೇಳಿದರು.
ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸಗಪತ್ರೆಯು ಶಸ್ತ್ರಚಿಕಿತ್ಸೆ ಒಳಗೊಂಡಂತೆ ಸಮಗ್ರ ಚಿಕಿತ್ಸೆಯನ್ನು ಒದಗಿಸುತ್ತಿದ್ದು, ಆಯೋಆರ್ಥರೈಟಿಸ್ (ಕೀಲು ಮತ) ಸಂಕೀರ್ಣ ವೈದ್ಯರ ತಂಡವು ಅಂಗವೈಕಲ್ಯಗಳು ಹಾಗೂ ರೋಬೋಟಿಕ್ ಹಾಗೂ ಕೀಲು, ಇತರ ತೀವ್ರ ಸಮಸ್ಯೆಗಳಿಂದ ಬಳಲುತ್ತಿರುವ ತಕ್ಕಂತೆ ಚಿಕಿತ್ಸೆ ನೀಡುತ್ತಿದೆ ಎಂದರು.
ಶಿವಮೊಗ್ಗದ ಪ್ರವೀಣ್ ಕುಮಾರ್ ಅವರ ಎರಡೂ ಮೊಣಕಾಲುಗಳಲ್ಲಿನ ತೀವು ಅಂಗವೈಕಲ್ಯದಿಂದಾಗಿ ಅವರು ಸುಮಾರು ಸೀಮಿತವಾಗಿದ್ದರು, ಸಮಸ್ಯೆ ತೀರಾ ಸಂಕೀರ್ಣವಾಗಿದ್ದರಿಂದ ಶಿವಮೊಗ್ಗ ಮತ್ತು ಭದ್ರಾವತಿ ಭಾಗದ ಹಲವು ಆಸ್ಪತ್ರೆಗಳು ಎಂಟು ವರ್ಷಗಳಿಂದ ಗಾಲಿಕುರ್ಚಿಗೆ ಅಂಟಿಕೊಳ್ಳುವಂತಾಗಿತ್ತು. ನಂತರ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಮೂಳೆ ರೋಗ ಚಿಕಿತ್ಸಾ ತಂಡವನ್ನು ಸಂಪರ್ಕಿಸಿದರು. ಅವರ ಆರೋಗ್ಯ ಸ್ಥಿತಿಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಿದ ನಂತರ, ವೈದ್ಯರ ತಂಡವು ಅವರ ಎರಡೂ ಮೊಣಕಾಲುಗಳಿಗೆ ರೋಬೋಟ್ ಆಧಾರಿತ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು. ಇಂದು ಅವರು ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ ನಡೆಯುತ್ತಿದ್ದು, ಅವರ ನಡೆದಾಡುವ ಸಾಮರ್ಥ್ಯ ಹಾಗೂ ಒಟ್ಟಾರೆ ಜೀವನಮಟ್ಟದಲ್ಲಿ ಅದ್ಭುತ ಬದಲಾವಣೆ ಕ೦ಡುಬ೦ದಿದೆ ಎಂದರು..
ಇನ್ನೊಬ್ಬ ಯುವ ರೋಗಿ ದಿಲೀಪ್ ಎಂಬುವರಿಗೆ ಆಂಟರೊಲ್ಯಾಟರಲ್ ಪ್ರೊಸೆಸ್ ಎಂಬ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದೆ. ಆಯ್ದ ಕೆಲವು ಪ್ರಮುಖ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರುವ ಈ ವಿಶೇಷ ವಿಧಾನದಲ್ಲಿ, ಸ್ನಾಯುಗಳಿಗೆ ಯಾವುದೇ ಹಾನಿಯಾಗದಂತೆ ಮುಂಭಾಗದಿಂದ ಸೊಂಟದ ಕೀಲು ಭಾಗವನ್ನು ತಲುಪಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಇದು ಸುತ್ತಮುತ್ತಲಿನ ಅಂಗಾಂಶಗಳನ್ನು ಸುರಕ್ಷಿತವಾಗಿರಿಸಿ, ಕೀಲಿನ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುವ ಜೊತೆಗೆ ರೋಗಿ ವೇಗವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ ಎಂದರು
ಮತ್ತೊಂದು ಪ್ರಕರಣದಲಿ, ತೀವ್ರ ಆರ್ಥರೈಟಿಸ್ ನಿಂದ ಬಳಲುತ್ತಿದ್ದ, ಶಿವಮೊಗ್ಗದ ಹಿರಿಯ ಮಹಿಳೆ ಶಹೀದಾ ಅವರಿಗೆ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಎರಡೂ ಮೊಣಕಾಲುಗಳಿಗೆ ರೋಬೋಟ್ ಆಧಾರಿತ ಶಸ್ತ್ರಚಿಕಿತ್ಸೆ ನಡೆಸಲಾಯಿತು. ವರ್ಷಗಳಿಂದ ಅನುಭವಿಸುತ್ತಿದ್ದು ತೀವು ನೋವಿನಿಂದ ಮುಕ್ತಿ ಪಡೆದ ಅವರು, ಮರಳಿ ಓಡಾಡುವ ಸಾಮರ್ಥ್ಯ ಪಡೆದಿದ್ದಾರೆ ಎಂದರು.
