ಜನ ನೋಟ
ಶಿವಮೊಗ್ಗ

ಎಫ್‌ಸಿ, ವಿಮೆ ಇಲ್ಲದೆ ಸಂಚಾರ: 70 ಆಟೋಗಳು ಪೊಲೀಸರ ವಶಕ್ಕೆ

ಶಿವಮೊಗ್ಗ: ನಗರದಲ್ಲಿ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಆಟೋಗಳ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಂದೇ ದಿನದಲ್ಲಿ ಸುಮಾರು 70 ಆಟೋಗಳನ್ನು ವಶಕ್ಕೆ ಪಡೆದು ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ.
ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಫಿಟ್ನೆಸ್ ಸರ್ಟಿಫಿಕೇಟ್ (ಎಫ್‌ಸಿ) ಹಾಗೂ ವಿಮೆ (ಇನ್ಶೂರೆನ್ಸ್) ಇಲ್ಲದ ಆಟೋಗಳನ್ನು ಗುರುತಿಸಿ ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಆಟೋಗಳನ್ನು ವಿವಿಧ ಪೊಲೀಸ್ ಠಾಣೆಗಳ ಆವರಣದಲ್ಲಿ ನಿಲ್ಲಿಸಲಾಗಿದೆ.
ಕೆಎಸ್‌ಆರ್‌ಟಿಸಿ, ರೈಲ್ವೆ ನಿಲ್ದಾಣ ಸೇರಿದಂತೆ
ಕೆಎಸ್‌ಆರ್‌ಟಿಸಿ, ರೈಲ್ವೆ ನಿಲ್ದಾಣ ಸೇರಿದಂತೆ ಹಲವೆಡೆ ತಪಾಸಣೆ
ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತ, ಕೆಎಸ್‌ಆರ್‌ಟಿಸಿ, ಕರ್ನಾಟಕ ಸಂಘ, ರೈಲ್ವೆ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ದಾಖಲೆಗಳಿಲ್ಲಹಾಗೂ ನಿಯಮ ಉಲ್ಲಂಘಿಸಿರುವ ಆಟೋಗಳನ್ನು ಹುಡುಕಿ ವಶಕ್ಕೆ ಪಡೆಯಲಾಗಿದೆ.

ಅಧಿಕೃತ ಮಾಹಿತಿಯ ಪ್ರಕಾರ ಶಿವಮೊಗ್ಗ ನಗರದಲ್ಲಿ ಸುಮಾರು 5,200ಕ್ಕೂ ಹೆಚ್ಚು ಆಟೋಗಳು ನೋಂದಣಿಯಾಗಿವೆ. ಆದರೆ ಈ ಪೈಕಿ ಸಾಕಷ್ಟು ಆಟೋಗಳ ಎಫ್‌ಸಿ ಹಾಗೂ ಇನ್ಶೂರೆನ್ಸ್ ದಾಖಲೆಗಳು ಸಮರ್ಪಕವಾಗಿ ನವೀಕರಣಗೊಂಡಿಲ್ಲ ಎಂಬುದು ಪೊಲೀಸರ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ.
*ಆರ್‌ಟಿಒ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ*
ವಶಪಡಿಸಿಕೊಂಡ ಆಟೋಗಳ ಮಾಲೀಕರನ್ನು
ಸಮ್ಮುಖದಲ್ಲಿ ದಾಖಲೆಗಳನ್ನು ಪರಿಶೀಲಿಸುವಂತೆ ಮಾಡಲಾಗಿದೆ. ಎಫ್‌ಸಿ ಹಾಗೂ ಇನ್ಸೂರೆನ್ಸ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸರಿಪಡಿಸಿಕೊಂಡು ವಾಹನಗಳನ್ನು ಕಾನೂನುಬದ್ದವಾಗಿ ಬಳಸುವಂತೆ ಸೂಚಿಸಲಾಗಿದೆ.
ಸ್ಥಳಕ್ಕೆ ಕರೆಸಿ, ಆರ್‌ಟಿಒ ಅಧಿಕಾರಿಗಳ
ಕೆಲವು ಆಟೋಗಳಲ್ಲಿ ಎಂಜಿನ್ ನಂಬರ್ ಸೇರಿದಂತೆ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳೂ ಕಂಡುಬಂದಿದ್ದು, ಅಂತಹ ವಾಹನಗಳ ಮಾಲೀಕರಿಗೆ ಅಗತ್ಯ ಕ್ರಮ ಕೈಗೊಳ್ಳಲು ಕಾಲಾವಕಾಶ ನೀಡಲಾಗಿದೆ ಎಂದು
ತಿಳಿದುಬಂದಿದೆ.

Related posts

ಭದ್ರಾವತಿ : ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕ ಸಾವು

JanaNota Editor

ಜಿಲ್ಲಾವಾರು ಪ್ರಗತಿಪರ ರೈತ, ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

JanaNota Editor

ಶಿವಮೊಗ್ಗ : ಶಾಲಾ ಕಟ್ಟಡಕ್ಕೆ NOC ನೀಡಲು ಲಂಚ : ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಬಲೆಗೆ

JanaNota Editor