ಜನ ನೋಟ
ಸಿನಿಮಾ

ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಯಶ್ – ‘ಟಾಕ್ಸಿಕ್’ ಯಶಸ್ಸಿಗಾಗಿ ವಿಶೇಷ ಪೂಜೆ

ವರದಿ: ಸನತ್ ಶಿವಮೊಗ್ಗ 

 

 

ಟಾಕ್ಸಿಕ್‌ʼ ಸಿನಿಮಾ ನಾಳೆ (ಆ.26) ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಈ ಬೆನ್ನಲ್ಲೇ ನಟ ಯಶ್ ಅವರು ಇಂದು (ಆ.25) ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ನಟ ಯಶ್, ಬಳಿಕ ಧರ್ಮಸ್ಥಳ ಶ್ರೀಕ್ಷೇತ್ರಕ್ಕೆ ತೆರಳಿದರು. ಮಂಜುನಾಥ ಸ್ವಾಮಿಯ ದರ್ಶನ ಪಡೆದ ಅವರು, ಗರ್ಭಗುಡಿಯ ಸಮೀಪ ನಿಂತು ಸುಮಾರು 10 ನಿಮಿಷಗಳ ಕಾಲ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು.

‘ಟಾಕ್ಸಿಕ್’ ಚಿತ್ರದ ಯಶಸ್ಸಿಗಾಗಿ ಯಶ್ ಅವರು ವಿಶೇಷ ಪೂಜೆ ಸಲ್ಲಿಸಿದ್ದು, ಬಳಿಕ ಮಹಾ ಮಂಗಳಾರತಿಯನ್ನೂ ಸ್ವೀಕರಿಸಿದರು.

ಪ್ರತೀ ಚಿತ್ರ ಬಿಡುಗಡೆಗೂ ಮುನ್ನ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡುವುದು ನಟ ಯಶ್ ಅವರ ರೂಢಿಯಾಗಿದೆ. ಈ ಸಂಪ್ರದಾಯವನ್ನು ಪ್ರತೀ ಬಾರಿಯೂ ಮುಂದುವರಿಸಿಕೊಂಡು ಬರುತ್ತಿರುವ ಯಶ್, ಇದೀಗ ‘ಟಾಕ್ಸಿಕ್’ ಚಿತ್ರದ ಯಶಸ್ಸಿಗಾಗಿ ಮಂಜುನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Related posts

ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯಶ್

JanaNota Editor

‘ಟಾಕ್ಸಿಕ್’ನಲ್ಲಿ ಮಹಿಳೆಯರ ಪಾತ್ರವಿದೆ, ಆದರೆ ‘ಫೀಮೇಲ್ ಗೇಝ್’ ಎಲ್ಲಿದೆ?

JanaNota Editor

‘ಡ್ರ್ಯಾಗನ್’ ಬಿಡುಗಡೆ ದಿನಾಂಕ ಫಿಕ್ಸ್ : ಜೂನ್ 11, 2027ಕ್ಕೆ ವಿಶ್ವದಾದ್ಯಂತ ತೆರೆಗೆ

JanaNota Editor