ಜನ ನೋಟ
ಶಿವಮೊಗ್ಗ

ಸಚಿವ ಸ್ಥಾನ ಸಿಗದ ಬೇಸರ: ‘ಜನತೆ ಹೇಳಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ’ ಎಂದ ಸಂಗಮೇಶ್ವರ್

ಸಚಿವ ಸ್ಥಾನ ವಂಚಿತರಾದ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹಿರಿಯ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಬಹಿರಂಗವಾಗಿಯೇ ತಮ್ಮ ಆಕ್ರೋಶ ಹೊರಹಾಕಿದ್ದಾರೆ. 

“ಕಳೆದ 30 ರಿಂದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿಯೇ ಹಗಲಿರುಳು ಕೆಲಸ ಮಾಡಿದ್ದೇನೆ. ಆಪರೇಷನ್ ಕಮಲದ ಸಮಯದಲ್ಲಿ ಬಿಜೆಪಿಯವರು 50 ಕೋಟಿ ರೂಪಾಯಿ ಹಣ ಕೊಟ್ಟು, ಮಂತ್ರಿ ಮಾಡುತ್ತೇವೆ ಎಂದರೂ ನಾನು ಪಕ್ಷಕ್ಕೆ ದ್ರೋಹ ಬಗೆಯದೆ ಇಲ್ಲೇ ಉಳಿದುಕೊಂಡಿದ್ದೆ.

ಆದರೆ ಈಗ ನನಗೆ ಸಚಿವ ಸ್ಥಾನ ಕೊಡುವುದಾಗಿ ಮಾತು ಕೊಟ್ಟು ಮೋಸ ಮಾಡಿದ್ದಾರೆ” ಎಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಸಂಗಮೇಶ್, “ವಿಧಾನಸಭೆಯಲ್ಲಿ 136 ಸ್ಥಾನ ಗೆದ್ದಿದ್ದೇವೆ ಎಂಬ ಅಹಂ ಮತ್ತು ಹಮ್ಮು ಕಾಂಗ್ರೆಸ್ ನಾಯಕರಿಗೆ ಬಂದಿದೆ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಷ್ಟೇ ಅಲ್ಲದೆ, ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಸುಳಿವು ನೀಡಿದ ಅವರು, “ನಾಳೆ ನನ್ನ ಕ್ಷೇತ್ರದ ಮತದಾರರು ಮತ್ತು ಬೆಂಬಲಿಗರೊಂದಿಗೆ ತುರ್ತು ಸಭೆ ನಡೆಸುತ್ತೇನೆ. ಕ್ಷೇತ್ರದ ಜನತೆ ಸಮ್ಮತಿಸಿದರೆ ಹಾಗೂ ರಾಜೀನಾಮೆ ನೀಡಲು ಸೂಚಿಸಿದರೆ, ನಾನು ಖಂಡಿತ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ” ಎಂದು ಎಚ್ಚರಿಕೆ ನೀಡಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ

 

Related posts

ಸೆ.30 ರಂದು ಶಿವಮೊಗ್ಗದ ವಿವಿಧೆಡೆ ವಿದ್ಯುತ್ ವ್ಯತ್ಯಯ

JanaNota Editor

ರೈಲ್ವೆ ನಿಲ್ದಾಣದೆದುರು ಸಿಟಿ ಬಸ್ ತಡೆದು ಪ್ರತಿಭಟನೆ

JanaNota Editor

ಎಫ್‌ಸಿ, ವಿಮೆ ಇಲ್ಲದೆ ಸಂಚಾರ: 70 ಆಟೋಗಳು ಪೊಲೀಸರ ವಶಕ್ಕೆ

JanaNota Editor