‘ವಾವ್! ಎಂತಹ ಸಿನಿಮಾ. ಒಂದು ಹೊಸ ಲೋಕ, ಒಂದು ಸಂಪೂರ್ಣ ಹೊಸ ಅನುಭವ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರವನ್ನು ವೀಕ್ಷಿಸಿರುವ ನಟ ಹಾಗೂ ನಿರ್ದೇಶಕ ಉಪೇಂದ್ರ, ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಉಪೇಂದ್ರ, “‘ಟಾಕ್ಸಿಕ್’ ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ! ಒಂದು ಹೊಸ ಲೋಕ… ಒಂದು ಸಂಪೂರ್ಣ ಹೊಸ ಅನುಭವ” ಎಂದು ಬಣ್ಣಿಸಿದ್ದಾರೆ.
ಚಿತ್ರದ ಪ್ರತಿಯೊಂದು ವಿಭಾಗದಲ್ಲೂ ಹೊಸತನ ಕಾಣಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಕಥೆ, ಮೇಕಿಂಗ್, ದೃಶ್ಯ ವೈಭವ, ಸಂಗೀತ ಹಾಗೂ ಅಭಿನಯ ಸೇರಿದಂತೆ ಸಿನಿಮಾದ ವಿವಿಧ ಅಂಶಗಳನ್ನು ಶ್ಲಾಘಿಸಿದ್ದಾರೆ.
“ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ” ಎಂದು ಉಪೇಂದ್ರ ಹೇಳಿದ್ದಾರೆ.
ಯಶ್ ಅವರ ವಿಭಿನ್ನ ಮ್ಯಾನರಿಸಂ ಹಾಗೂ ಸ್ಕ್ರೀನ್ ಪ್ರೆಸೆನ್ಸ್ ಕೂಡ ಗಮನ ಸೆಳೆಯುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊನೆಯಲ್ಲಿ ಯಶ್ ಹಾಗೂ ಇಡೀ ‘ಟಾಕ್ಸಿಕ್’ ಚಿತ್ರತಂಡಕ್ಕೆ ಹ್ಯಾಟ್ಸ್ ಆಫ್ ಹೇಳಿರುವ ಉಪೇಂದ್ರ, “ಟಾಕ್ಸಿಕ್ ಒಂದು ಸಿನಿಮಾ ಅಲ್ಲ, ಒಂದು ಅನುಭವ” ಎಂದು ಬಣ್ಣಿಸಿದ್ದಾರೆ.

ಉಪೇಂದ್ರ ಅವರ ಈ ಮೆಚ್ಚುಗೆಯ ಮಾತುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿವೆ.
