ಜನ ನೋಟ
ರಾಜ್ಯ

ಕೆಆರ್‌ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ‌ ನಾಯಕರ ಬಂಧನ

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಮಿಳುನಾಡಿಗೆ ಪ್ರತಿ ದಿನ 3,500 ಕ್ಯುಸೆಕ್ ಕಾವೇರಿ ನೀರು ಹರಿಸಬೇಕು ಎಂಬ ಕಾವೇರಿ ನೀರು‌ ನಿರ್ವಹಣಾ ಪ್ರಾಧಿಕಾರದ ನಿರ್ದೇಶನ ವಿರೋಧಿಸಿ ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ ಶುಕ್ರವಾರ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು‌ ಪೊಲೀಸರು ಬಂಧಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮೈಸೂರು ಶಾಸಕ ಶ್ರೀವತ್ಸ ಸೇರಿದಂತೆ ನೂರಾರು ಮಂದಿಯನ್ನು ಬಂಧಿಸಲಾಯಿತು.

ಕೆಆರ್‌ಎಸ್‌ನ ಖಾಸಗಿ ಹೋಟೆಲ್ ಮತ್ತು ಸಮುದಾಯ ಭವನದಲ್ಲಿ‌ ಕೆಲಕಾಲ ಇದ್ದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಯಿತು.

 

Related posts

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ಮಂಕಿಮ್ಯಾನ್’ : ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಯುವತಿ ಯಾರು ಗೊತ್ತಾ?

JanaNota Editor

ಸಿಗರೇಟ್ ಸೇದಿದ್ದನ್ನು ಪ್ರಶ್ನಿಸಿದ ವ್ಯಕ್ತಿಯ ಹತ್ಯೆ : 8 ಮಂದಿಗೆ ಜೀವಾವಧಿ

JanaNota Editor

ಮಂಗಳೂರು–ಶೃಂಗೇರಿ–ಶಿವಮೊಗ್ಗ ಹೊಸ ರೈಲು ಮಾರ್ಗ!

JanaNota Editor