ಜನ ನೋಟ
ಶಿವಮೊಗ್ಗ

ವಾಸವಿ ವಿದ್ಯಾಸಂಸ್ಥೆ ರಾಷ್ಟ್ರಕ್ಕೆ ದೊಡ್ಡ ಶಕ್ತಿಯಾಗಿ ಬೆಳೆಯಲಿದೆ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ನಗರದ ವಾಸವಿ ವಿದ್ಯಾಸಂಸ್ಥೆಯು ಭವಿಷ್ಯದಲ್ಲಿ ಇಡಿ ರಾಷ್ಟ್ರಕ್ಕೆ ದೊಡ್ಡ ಶಕ್ತಿಯಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಕೋಟೆ ರಸ್ತೆಯಲ್ಲಿ ಶುಕ್ರವಾರ ಪ್ರತಿಷ್ಠಿತ ವಾಸವಿ ವಿದ್ಯಾಲಯದ ನೂತನ ಶೈಕ್ಷಣಿಕ ಸಂಕೀರ್ಣ ಉದ್ಘಾ ಟಿಸಿ ಮಾತನಾಡಿದ ಅವರು, ಸಮಾಜ ದಲ್ಲಿ ಮಧ್ಯಮ ವರ್ಗದವರು, ಬಡ ವರು ಹಾಗೂ ಶ್ರೀಮಂತರೂ ಇದ್ದಾರೆ. ಅವರೆಲ್ಲರೂ ನೆರವಿನಿಂದಲೇ ಭವ್ಯವಾದ ಶೈಕ್ಷಣಿಕ ಸಂಕೀರ್ಣ ವಾಸವಿ ಆವರಣದಲ್ಲಿ ತಲೆ ಎತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ರಾಷ್ಟ್ರಮಟ್ಟದ ಬನ್ಸಾಲ್ ವಿದ್ಯಾ ಸಂಸ್ಥೆಯು ವಾಸವಿ ಸಂಸ್ಥೆಯೊಂದಿಗೆ ಕೈಜೋಡಿಸಿ ಪಿಯು ವಿಜ್ಞಾನ ಕಾಲೇಜು ಆರಂಭಿಸಿದೆ. ವಾಸವಿ ಜನಾಂಗವೇ ಶಿವಮೊಗ್ಗಕ್ಕೆ ದೊಡ್ಡ ಆಸ್ತಿಯಾಗಿದ್ದು ಶೈಕ್ಷಣಿಕವಾಗಿ, ಧಾರ್ಮಿಕವಾಗಿ ದೊಡ್ಡ ಕೆಲಸ ಮಾಡುತ್ತಿದೆ. ವಾಸವಿ ಸಂಸ್ಥೆಯ ಎಲ್ಲ ಕೆಲಸಗಳಿಗೂ ಶುಭವಾಗಲಿ ಎಂದು ಹಾರೈಸಿದರು.
ವಾಸವಿ ಮಹಾವಿದ್ಯಾಲಯದ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ಪ್ರಾಸ್ತಾವಿಕ ಮಾತನಾಡಿ, ವಾಸವಿ ಶಿಕ್ಷಣ ಸಂಸ್ಥೆಗೆ ೪೫ವರ್ಷ ಪೂರ್ಣಗೊಂಡಿದೆ. ಕಳೆದ ಫೆಬ್ರವರಿಯಲ್ಲಿ ವಾಸವಿ ವಿದ್ಯಾಲಯದ ಶೈಕ್ಷಣಿಕ ಸಂಕೀರ್ಣದ ಭೂಮಿಪೂಜೆ ಮಾಡಲಾಗಿತ್ತು. ಮಳೆ ಕಾರಣದಿಂದ ಜೂನ್ ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಶುರುವಾಗಿತ್ತು. ಒಂದು ವರ್ಷದಲ್ಲಿ ಕಟ್ಟಡ ಪುರ್ಣಗೊಂಡಿದೆ ಎಂದರು.
೬ ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದೆ. ೮೦ ಠೇವಣಿದಾರರಲ್ಲಿ ೫೦ ಠೇವಣಿದಾರರು ಮಧ್ಯಮ ವರ್ಗದವರು. ೨೮ ಟ್ರಸ್ಟಿಗಳು ಇದುವರೆಗೆ ಒಮ್ಮತದ ನಿರ್ಧಾರ ತೆಗೆದುಕೊಂಡ ಪರಿಣಾಮ ಸಂಸ್ಥೆ ಈ ಮಟ್ಟಕ್ಕೆ ಬೆಳೆದಿದೆ ಎಂದು ಹೇಳಿದರು.
ಕಾಲೇಜಿನ ಹಳೇ ವಿದ್ಯಾರ್ಥಿ, ಆಚಾರ್ಯ ಶಾಮಶಂಕರ ಭಟ್ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ವಾಸವಿ ಶಾಲೆ ಸಂಸ್ಥಾಪಕ ಅಧ್ಯಕ್ಷರಾದ ಭೂಪಾಳಂ ಶಶಿಧರ್ ಮತ್ತು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಗೌರವ ಸಮರ್ಪಿಸಲಾಯಿತು. ವಾಸವಿ ವಿದ್ಯಾಲಯದ ಅಧ್ಯಕ್ಷ ಬಿ.ಎಲ್.ಶಾಮ ಸುಂದರ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಿ.ಎಸ್.ಅರುಣ್, ಮಂಗಳೂರಿನ ತ್ರಿವಿಕ್ ಫೌಂಡೇಶನ್ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಶಿವಮೊಗ್ಗದ ಡಿಇಸಿಟಿ ಕಾರ್ಯದರ್ಶಿ ಎಂ.ಎಸ್.ಪ್ರಶಾಂತ್, ಪ್ರಮುಖರಾದ ಎಚ್.ಮಂಜುನಾಥ, ಎಸ್.ಎನ್.ಹಾಲಪ್ಪ, ನಾಗರಾಜ್ ಉಪಸ್ಥಿತರಿದ್ದರು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಮಶಂಕರ ಭಟ್ ನೇತೃತ್ವದಲ್ಲಿ ನೂತನ ಕಟ್ಟಡದ ವಾಸ್ತು ಶಾಂತಿ ಮತ್ತು ಪೂಜಾ ಕಾರ್ಯಕ್ರಮ ನೆರವೇರಿತು. ಬೆಳಗ್ಗೆ ನಗರದ ಗಾಂಧಿ ಬಜಾರ್ ಕನ್ನಿಕಾ ಪರಮೇಶ್ವರಿ ಹಾಗೂ ಕೋಟೆ ಸೀತಾ ರಾಮಾಂಜನೇಯ ದೇವರ ಪರಿವಾರ ದೇವತೆಗಳ ಮೆರವಣಿಗೆಯು ಮಂಗಳ ವಾದ್ಯಗಳ ಜತೆಗೆ ಗಾಂಧಿ ಬಜಾರ್‌ನಿಂದ ಆರಂಭವಾಗಿ ವಾಸವಿ ಶಾಲೆಯ ಆವರಣದಲ್ಲಿರುವ ನೂತನ ಕಟ್ಟಡವನ್ನು ಪ್ರವೇಸಿತು. ನಂತರ ಮಂಗಳ ನಿಧಿ ಕಾರ್ಯಕ್ರಮ ನೆರವೇರಿತು. ಸಂಜೆ ವಿದ್ಯಾರ್ಥಿಗಳಿಂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಗಾಯಕ ಪ್ರಹ್ಲಾದ್ ದೀಕ್ಷಿತ್ ತಂಡದಿಂದ ಮನಸೆಳೆಯುವ ಸಂಗೀತ ಕಾರ್ಯಕ್ರಮ ನಡೆಯಿತು.

Related posts

ಮಾತೃಭಾಷೆಗೆ ಶಿಕ್ಷಣದಲ್ಲಿ ಆದ್ಯತೆ ಅಗತ್ಯ

JanaNota Editor

ಸಾಗರ : ಟಿಪ್ಪರ್‌ ಡಿಕ್ಕಿ – ಮಗಳು ಸಾವು ಬೆನ್ನಲ್ಲೇ : 8 ದಿನಗಳ ಬಳಿಕ ತಂದೆಯೂ ವಿಧಿವಶ

JanaNota Editor

‘ಕ್ರಾಂತಿಯ ಜ್ಯೋತಿ: ಪ್ರವಾದಿ’ ಶೀರ್ಷಿಕೆಯಡಿ ರಾಜ್ಯಾದ್ಯಂತ ಸೀರತ್‌ ಅಭಿಯಾನ

JanaNota Editor