ಜನ ನೋಟ
ಶಿವಮೊಗ್ಗ

ಸೆ.6ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

ಶಿವಮೊಗ್ಗ: ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ಹಾಗೂ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿನ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ಕೈಗೊಳ್ಳಲಿರುವುದರಿಂದ ಸೆ.6ರಂದು ನಗರದ ವಿವಿಧೆಡೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ನಗರ ಉಪವಿಭಾಗ-2ರ ವ್ಯಾಪ್ತಿಯ ಪಿಯರ್‌ಲೈಟ್, ಗಾಜನೂರು ರೂರಲ್, ಊರುಗಡೂರು, ರಾಮಿನಕೊಪ್ಪ, ಗೋಪಿಶೆಟ್ಟಿಕೊಪ್ಪ, ಇಲಿಯಾಸ್ ನಗರ, ಚಾಲುಕ್ಯನಗರ, ಕೆ.ಹೆಚ್.ಬಿ. ಕಾಲೋನಿ, ಮಂಡ್ಲಿ, ಎನ್.ಟಿ. ರಸ್ತೆ, ಮರ್ಣಾಮಿ ಬೈಲು, ಗಂಧರ್ವನಗರ, ಹಳೆ ಮಂಡ್ಲಿ, ವಾದಿಹುದ, ಸೂಳೆಬೈಲು, ಮದಾರಿಪಾಳ್ಯ, ಕಲ್ಲೂರು ಮಂಡ್ಲಿ ಕೈಗಾರಿಕಾ ಪ್ರದೇಶ, ಕುರುಬರಪಾಳ್ಯ, ಸವಾಯಿಪಾಳ್ಯ, ಮುರಾದ್‌ನಗರ, ಓ.ಟಿ. ರಸ್ತೆ, ಬಿ.ಬಿ. ರಸ್ತೆ, ಕುಂಬಾರಕೇರಿ, ಆರ್.ಎಂ.ಎಲ್. ನಗರ, ಜೆ.ಸಿ. ನಗರ, ದುರ್ಗಿಗುಡಿ, ನೆಹರು ರಸ್ತೆ, ಗಾರ್ಡನ್ ಏರಿಯಾ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ, ಟಿಪ್ಪುನಗರ, ಮಿಳಘಟ್ಟ, ಅಣ್ಣಾನಗರ, ಕೆ.ಆರ್.ಪುರಂ, ಗಾಂಧಿಬಜಾರ್, ಉಪ್ಪಾರಕೇರಿ, ಬಿ.ಹೆಚ್. ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದಲ್ಲದೆ ಎಂ.ಎಫ್.-4, 9, 14 ಮತ್ತು 16 ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಪೇಪರ್ ಪ್ಯಾಕೇಜ್, ಕಲ್ಲೂರು ಮಂಡ್ಲಿ ಇಂಡಸ್ಟ್ರಿಯಲ್ ಏರಿಯಾ, ಶಂಕರ ಕಣ್ಣಿನ ಆಸ್ಪತ್ರೆ, ಎನ್‌ಎಚ್ ಆಸ್ಪತ್ರೆ, ಶಾರದನಗರ, ಅನ್ನಪೂರ್ಣೇಶ್ವರಿ ಬಡಾವಣೆ, ಮಲ್ನಾಡ್ ಕೋಕ್, ಹಳೆ ಮಂಡ್ಲಿ, ಇಲಿಯಾಸ್ ನಗರ, ಹರಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Related posts

ಮಾತೃಭಾಷೆಗೆ ಶಿಕ್ಷಣದಲ್ಲಿ ಆದ್ಯತೆ ಅಗತ್ಯ

JanaNota Editor

ಈದ್ ಹಬ್ಬಕ್ಕೆ ಶಿವಮೊಗ್ಗದಲ್ಲಿ ಬಿಗಿ ಭದ್ರತೆ: 3,000 ಪೊಲೀಸರ ನಿಯೋಜನೆ

JanaNota Editor

ಮಳೆ ಮಾಪನ ಕೇಂದ್ರಗಳ ದುರಸ್ಥಿ ವಿಳಂಬ: ರೈತರಲ್ಲಿ ಆತಂಕ, ಶೀಘ್ರ ಕ್ರಮಕ್ಕೆ ಒತ್ತಾಯ

JanaNota Editor