ಜನ ನೋಟ
ಸಿನಿಮಾ

ಯಶ್ ಒಂದೇ ಕರೆ… ನಯನತಾರಾ ಬೆಂಗಳೂರಿಗೆ

ಬೆಂಗಳೂರು: ‘ಟಾಕ್ಸಿಕ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಯನತಾರಾ ಅವರನ್ನು ಭಾಗವಹಿಸುವಂತೆ ಕೆವಿಎನ್ ಪ್ರೊಡಕ್ಷನ್ಸ್ ಮನವಿ ಮಾಡಿತ್ತು. ಆದರೆ, ನಯನತಾರಾ ಸಾಮಾನ್ಯವಾಗಿ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಅವರ ಮ್ಯಾನೇಜರ್ ತಿಳಿಸಿದ್ದರು. ಆದರೂ, ನಿರ್ಮಾಣ ಸಂಸ್ಥೆ ನಯನತಾರಾ ಅವರ ಉಪಸ್ಥಿತಿಗಾಗಿ ವಿಶೇಷ ಮನವಿ ಮಾಡಿತ್ತು.

ಈ ವಿಚಾರ ತಿಳಿದ ನಟ ಯಶ್, ನಯನತಾರಾ ಅವರಿಗೆ ಖುದ್ದಾಗಿ ಕರೆ ಮಾಡಿ ‘ಟಾಕ್ಸಿಕ್’ ಪ್ರಚಾರದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ತೊಂದರೆ ಇಲ್ಲ ಎಂದ ನಯನತಾರಾ, ತಾವು ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದಾಗಿ ತಿಳಿಸಿದರು. ತಮ್ಮ ಎಲ್ಲಾ ದೃಶ್ಯಗಳು ಸಲ್ಮಾನ್ ಖಾನ್ ಅವರೊಂದಿಗೇ ಇರುವುದರಿಂದ ಶೂಟಿಂಗ್‌ಗೆ ಗೈರಾದರೆ ಚಿತ್ರೀಕರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದರು.

ಪರಿಸ್ಥಿತಿಯನ್ನು ಅರಿತ ಯಶ್, ತಕ್ಷಣ ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಿ ವಿಷಯವನ್ನು ವಿವರಿಸಿದರು. ನಾಯಕಿಯ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಮುಖ್ಯವೆಂದು ತಿಳಿಸಿದ ಸಲ್ಮಾನ್, ಅಗತ್ಯವಿದ್ದರೆ ತಮ್ಮ ಚಿತ್ರದ ಚಿತ್ರೀಕರಣವನ್ನು ಮುಂದೂಡಿದರೂ ನಯನತಾರಾ ‘ಟಾಕ್ಸಿಕ್’ ಪ್ರಚಾರದಲ್ಲಿ ಭಾಗವಹಿಸಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

 

ಇದಾದ ಬಳಿಕ ನಯನತಾರಾ ಮಧ್ಯಾಹ್ನ 12:30ಕ್ಕೆ ಬೆಂಗಳೂರಿಗೆ ಆಗಮಿಸಿ, ಸಂಜೆ ‘ಟಾಕ್ಸಿಕ್’ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮ ಮುಗಿದ ಬಳಿಕ ಮರುದಿನವೇ ಮುಂಬೈಗೆ ತೆರಳಿ ಸಲ್ಮಾನ್ ಖಾನ್ ಅವರ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಿದರು.

Related posts

ಈ ಬಾರಿ ಕಿಚ್ಚನ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮ ಇಲ್ಲ : ಅಭಿಮಾನಿಗಳಿಗೆ ಮಹತ್ವದ ಸೂಚನೆ

JanaNota Editor

ಶಿವಮೊಗ್ಗದಲ್ಲಿ ಜೋರಾಗಿದೆ ಟಾಕ್ಸಿಕ್ ಫೀವರ್ : ಚಿತ್ರಮಂದಿರದಲ್ಲಿ ಬೆಳಿಗ್ಗೆ 6 ಕ್ಕೆ ಫ್ಯಾನ್ಸ್ ಶೋ

JanaNota Editor

‘ಸ್ಲಮ್ ಡಾಗ್’ ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್; ‌ಪವರ್‌ಫುಲ್ ಅಧಿಕಾರಿ ‘ಗೌರಿ ಹೆಗ್ಡೆ’ ಪಾತ್ರದಲ್ಲಿ ಟಬು!

JanaNota Editor