ಜನ ನೋಟ
ಕ್ರೈಂ ನ್ಯೂಸ್

ಪುರದಾಳು ಡ್ಯಾಮ್ಗೆ ತೆರಳಿದ್ದ ವಿದ್ಯಾರ್ಥಿನಿಯ ಚಿನ್ನದ ಸರ ಕಸಿದು ಪರಾರಿಯಾದ ದುಷ್ಕರ್ಮಿ

ವರದಿ: ಸನತ್ ಶಿವಮೊಗ್ಗ

ಶಿವಮೊಗ್ಗ : ಪುರದಾಳು ರಸ್ತೆಯಲ್ಲಿ ಸ್ನೇಹಿತೆಯರಿಗಾಗಿ ಕಾರು ನಿಲ್ಲಿಸಿ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ದಾಳಿ ನಡೆಸಿ, ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.
ದಂತ ವೈದ್ಯಕೀಯ ಕೋರ್ಸ್ ವಿದ್ಯಾರ್ಥಿನಿ ಅವರು ಸ್ನೇಹಿತೆಯರೊಂದಿಗೆ ಪುರದಾಳು ಡ್ಯಾಂ ಕಡೆಗೆ ತೆರಳುತ್ತಿದ್ದರು. ಸ್ನೇಹಿತೆಯರು ಸ್ಕೂಟಿಯಲ್ಲಿ ಹಿಂದೆ ಬರುತ್ತಿದ್ದರು. ಅವರು ಬರುವವರೆಗೆ ಕಾಯಲು ಅವರು ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿದ್ದರು.
ರಸ್ತೆ ಬದಿ ಕಾರು ನಿಲ್ಲಿಸಿದ್ದ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಬ ಕಾರಿನ ಡ್ರೈವರ್ ಸೈಡ್ ಗ್ಲಾಸ್ ಅನ್ನು ಕೋಲಿನಿಂದ ಹೊಡೆದು ಒಡೆದಿದ್ದಾನೆ. ಅಲ್ಲದೆ ಅದೇ ಕೋಲಿನಿಂದ ವಿದ್ಯಾರ್ಥಿಗೆ ಬೆದರಿಕೆ ಹಾಕಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು 15 ಗ್ರಾಂ ತೂಕದ ₹1,40,000 ಮೌಲ್ಯದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದ್ದೆ.

Related posts

ಶಿವಮೊಗ್ಗದ ರಾಹುಲ್ ಹುಂಡೈ ಶೋರೂಮ್‌ಗೆ ಆಕಸ್ಮಿಕ ಬೆಂಕಿ

JanaNota Editor

ಅರಸಾಳು ಬಳಿ 20 ಅಡಿ ಆಳದ ಕಂದಕಕ್ಕೆ ಬಿದ್ದ ಲಾರಿ

JanaNota Editor

ಬೈಕ್ ನೀಡಿದ ಮಾಲೀಕನಿಗೆ 27 ಸಾವಿರ ದಂಡ

JanaNota Editor