ಜನ ನೋಟ
ಶಿವಮೊಗ್ಗ

ಬೆಂಗಳೂರಿನ ಆಸ್ಟರ್ ಸಿಎಂಐ ಹಾಸ್ಪಿಟಲ್ ಸಹಯೋಗದಲ್ಲಿ ಶಿವಮೊಗ್ಗದಲ್ಲಿ ನೋವು ನಿವಾರಣಾ ಶಿಬಿರ

ಶಿವಮೊಗ್ಗ: ಬೆಂಗಳೂರಿನ ಆಸ್ಟರ್ ಸಿಎಂಐ ಹಾಸ್ಪಿಟಲ್ ಸಹಯೋಗದೊಂದಿಗೆ ಬೆನ್ನುನೋವು, ಕುತ್ತಿಗೆನೋವು, ಸಂಧಿವಾತ, ಸೈಯಾಟಿಕಾ ಸೇರಿದಂತೆ ವಿವಿಧ ದೀರ್ಘಕಾಲದ ನೋವಿನ ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರಿಗಾಗಿ ಸೆ.12ರಂದು ನೋವು ನಿವಾರಣಾ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಖ್ಯಾತ ನೋವು ನಿವಾರಣಾ ತಜ್ಞ ಡಾ. ರಾಘವೇಂದ್ರ ರಾಮಾಂಜುಲು ಅವರ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತಜ್ಞ ವೈದ್ಯರೊಂದಿಗೆ ನೇರ ಸಂವಾದ ಹಾಗೂ ಸಲಹೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ವಿವಿಧ ಸ್ಥಳಗಳಲ್ಲಿ ವೈದ್ಯರೊಂದಿಗೆ ನೇರ ಸಂವಾದ

  • ಬೆಳಗ್ಗೆ 9.30ರಿಂದ 11ರವರೆಗೆ: ನೂರೋ ಭಾರತ್ ಆಸ್ಪತ್ರೆ, ಜ್ಯುವೆಲ್ ರಾಕ್ ರಸ್ತೆ
  • ಬೆಳಗ್ಗೆ 11.30ರಿಂದ ಮಧ್ಯಾಹ್ನ 1ರವರೆಗೆ: ಮೆಟ್ರೋ ಆಸ್ಪತ್ರೆ, ಜಯನಗರ
  • ಮಧ್ಯಾಹ್ನ 3ರಿಂದ 4.30ರವರೆಗೆ: ದೇವರಬಾವಿ ಅಂತಃಸ್ರಾವಕ ಮತ್ತು ಮಧುಮೇಹ ಕೇಂದ್ರ, 4ನೇ ಕ್ರಾಸ್, ದುರ್ಗಿಗುಡಿ
  • ಸಂಜೆ 5ರಿಂದ 6ರವರೆಗೆ: ಸನ್ ಬೋನ್ ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆ, ತಿಲಕ್ ನಗರ, ದುರ್ಗಿಗುಡಿ

ಹಲವು ನೋವಿನ ಸಮಸ್ಯೆಗಳಿಗೆ ತಜ್ಞರ ಸಲಹೆ

ಶಿಬಿರದಲ್ಲಿ ಬೆನ್ನುನೋವು, ಕುತ್ತಿಗೆನೋವು, ಭುಜದ ನೋವು, ಸೈಯಾಟಿಕಾ, ಕ್ಯಾನ್ಸರ್ ಸಂಬಂಧಿತ ನೋವು, ಟ್ರೈಜೆಮಿನಲ್ ನ್ಯೂರಾಲ್ಜಿಯಾ, ಮೈಗ್ರೇನ್, ನರಗಳಿಗೆ ಸಂಬಂಧಿಸಿದ ನೋವು, ಕೀಲು ನೋವು ಹಾಗೂ ಸ್ನಾಯು ನೋವು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ತಜ್ಞರಿಂದ ಸಲಹೆ ಮತ್ತು ಚಿಕಿತ್ಸಾ ಮಾರ್ಗದರ್ಶನ ನೀಡಲಾಗುತ್ತದೆ.

ನೋವಿನ ಮೂಲ ಕಾರಣಗಳನ್ನು ತಿಳಿದುಕೊಳ್ಳುವುದು, ಆಧುನಿಕ ಚಿಕಿತ್ಸಾ ವಿಧಾನಗಳ ಕುರಿತು ಅರಿವು ಮೂಡಿಸುವುದು ಹಾಗೂ ದೀರ್ಘಕಾಲದ ನೋವಿನಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸಾ ಮಾರ್ಗದರ್ಶನ ನೀಡುವುದು ಶಿಬಿರದ ಉದ್ದೇಶವಾಗಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆ ಆಡಳಿತ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ: 9620001639 / 7829128776

Related posts

ಸಾಗರದಲ್ಲಿ ಭೀಕರ ಅಪಘಾತ: ಟಿಪ್ಪರ್ ಲಾರಿ ಡಿಕ್ಕಿಗೆ ಯುವತಿ ಸಾವು, ತಂದೆ ಗಂಭೀರ

JanaNota Editor

ಮಾತೃಭಾಷೆಗೆ ಶಿಕ್ಷಣದಲ್ಲಿ ಆದ್ಯತೆ ಅಗತ್ಯ

JanaNota Editor

ವಾಸವಿ ವಿದ್ಯಾಸಂಸ್ಥೆ ರಾಷ್ಟ್ರಕ್ಕೆ ದೊಡ್ಡ ಶಕ್ತಿಯಾಗಿ ಬೆಳೆಯಲಿದೆ: ಕೆ.ಎಸ್.ಈಶ್ವರಪ್ಪ

JanaNota Editor