ಜನ ನೋಟ
ಕ್ರೈಂ ನ್ಯೂಸ್

ಬೈಕ್ ನೀಡಿದ ಮಾಲೀಕನಿಗೆ 27 ಸಾವಿರ ದಂಡ

ವರದಿ: ಸನತ್ ಶಿವಮೊಗ್ಗ 

ಶಿವಮೊಗ್ಗ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ವಾಹನ ಮಾಲೀಕನಿಗೆ ಶಿವಮೊಗ್ಗ ನ್ಯಾಯಾಲಯ ₹27,000 ದಂಡ ವಿಧಿಸಿದೆ.

ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ಆರೋಪದ ಮೇರೆಗೆ ವಾಹನ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿದ ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಾಹನ ಮಾಲೀಕನಿಗೆ 27,000 ದಂಡ ವಿಧಿಸಿ ಆದೇಶ ನೀಡಿದೆ.

ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡುವ ಪೋಷಕರು ಹಾಗೂ ವಾಹನ ಮಾಲೀಕರಿಗೆ ಈ ತೀರ್ಪು ಎಚ್ಚರಿಕೆಯ ಸಂದೇಶವಾಗಿದೆ.

Related posts

ಶಿವಮೊಗ್ಗದಲ್ಲಿ ಪಾಲಿಸಿ ಕ್ಯಾನ್ಸಲ್ ಮಾಡಿದ ಬ್ಯಾಂಕ್‌ಗೆ ಬಿಗ್ ಶಾಕ್! : 20 ಲಕ್ಷ ಪರಿಹಾರಕ್ಕೆ ಆದೇಶ

JanaNota Editor

ತಾಯಿಗಾಗಿ ಬದುಕು ಎಂದು ಅಂಗಲಾಚಿದರೂ ಐಫೋನ್ ಗಾಗಿ ಸಾವನ್ನಪ್ಪಿದ ಯುವಕ

JanaNota Editor

ಶಿವಮೊಗ್ಗದ ಫುಡ್ ಕೋರ್ಟ್ ಗಳಿಗೆ ಎಸಿ ಮೈತ್ರಿ ಭೇಟಿ : ಪರಿಶೀಲನೆ

JanaNota Editor