ಜನ ನೋಟ
ಶಿವಮೊಗ್ಗ

ಹಾಸ್ಟೆಲ್ ಊಟದ ಹಾಲ್‌ನಲ್ಲಿ ಬೀದಿ ನಾಯಿ : ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಕಂಡುಬಂದ ಅಚ್ಚರಿ ದೃಶ್ಯ

ಶಿವಮೊಗ್ಗ: ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಊಟದ ವೇಳೆ ತಹಶೀಲ್ದಾರ್ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಊಟದ ಹಾಲ್‌ನಲ್ಲೇ ಬೀದಿ ನಾಯಿ ಕಾಣಿಸಿಕೊಂಡು ಅಧಿಕಾರಿಗಳು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ.

ಶಿವಮೊಗ್ಗದ ಮಲ್ಲಿಗೇನಹಳ್ಳಿ ಬಡಾವಣೆಯಲ್ಲಿರುವ ದೇವರಾಜ ಅರಸು ವಿದ್ಯಾರ್ಥಿ ನಿಲಯಕ್ಕೆ ತಹಶೀಲ್ದಾರ್ ರಾಜೀವ್ ನೇತೃತ್ವದ ತಂಡ ದಿಢೀರ್ ಭೇಟಿ ನೀಡಿತು. ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಹಾಸ್ಟೆಲ್‌ನಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಪರಿಶೀಲನೆ ವೇಳೆ ಹಾಸ್ಟೆಲ್‌ನಲ್ಲಿ ವಾರ್ಡನ್ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತಹಶೀಲ್ದಾರ್ ರಾಜೀವ್ ಅಸಮಾಧಾನ ವ್ಯಕ್ತಪಡಿಸಿದರು. ವಾರ್ಡನ್ ಇಲ್ಲದೇ ಊಟವನ್ನು ಯಾರು ಬಡಿಸುತ್ತಾರೆ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿ, ಹಾಸ್ಟೆಲ್‌ನಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.

ನಂತರ ವಾರ್ಡನ್‌ಗೆ ದೂರವಾಣಿ ಮೂಲಕ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಸೂಚಿಸಿದ ತಹಶೀಲ್ದಾರ್, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರದಂತೆ ಎಚ್ಚರಿಕೆ ನೀಡಿದರು. ಹಾಸ್ಟೆಲ್‌ನಲ್ಲಿ ಎಲ್ಲ ವ್ಯವಸ್ಥೆಗಳೂ ನಿಯಮಾನುಸಾರ ನಡೆಯಬೇಕು ಎಂದು ಸೂಚಿಸಿದರು.

 

Related posts

ಎಫ್‌ಸಿ, ವಿಮೆ ಇಲ್ಲದೆ ಸಂಚಾರ: 70 ಆಟೋಗಳು ಪೊಲೀಸರ ವಶಕ್ಕೆ

JanaNota Editor

ಆ. 11ರಿಂದ ಮನೆ ಮನೆಗೆ ತಿರಂಗಾ ವಿತರಣೆ

JanaNota Editor

ಸೆ. ೫ ರಿಂದ ಎರಡು ದಿನ ‘ಶ್ರಾವಣ ಸಂಭ್ರಮ’ ವಸ್ತು ಪ್ರದರ್ಶನ

JanaNota Editor