ಶಿವಮೊಗ್ಗ: ಪತ್ರಿಕಾಗೋಷ್ಠಿಯಲ್ಲಿ ಕುಮಾರ್ ಬಂಗಾರಪ್ಪ ಅವರ ಆರೋಪಗಳ ಕುರಿತು ಪ್ರತಿಕ್ರಿಯಿಸಲು ಆರಂಭದಲ್ಲಿ ನಿರಾಕರಿಸಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಳಿಕ ತೀವ್ರ ವಾಗ್ದಾಳಿ ನಡೆಸಿದರು.
“ಅವರು ತಮ್ಮ ಪಕ್ಷದಲ್ಲೇ ಡಮ್ಮಿಯಾಗಿ ಎಲ್ಲಿ ಹೋಗಿ ಕೂತಿದ್ದಾರೆ ಅನ್ನೋದನ್ನು ಅವರೇ ನೋಡಿಕೊಳ್ಳಲಿ. ಕುಮಾರ್ ಬಂಗಾರಪ್ಪ ದಿಕ್ಕುದೆಸೆ ಇಲ್ಲದೆ ಕೂತಿದ್ದಾರೆ. ಅವರ ಹೊಲಸು ಹೇಳಿಕೆಗಳಿಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ಇದನ್ನು ಹೊರತುಪಡಿಸಿ ಮಾತನಾಡಲು ಬಹಳಷ್ಟು ವಿಚಾರಗಳಿವೆ,” ಎಂದು ಹೇಳಿದರು.
ಕುಮಾರ್ ಬಂಗಾರಪ್ಪ ಅವರನ್ನು **“ತುಕ್ಕು ಹಿಡಿದ ಕಾರು”**ಗೆ ಹೋಲಿಸಿದ ಮಧು ಬಂಗಾರಪ್ಪ, “ತುಕ್ಕು ಹಿಡಿದ ಕಾರನ್ನು ಎಷ್ಟು ಬಾರಿ ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಲು ಸಾಧ್ಯ? ಗ್ಯಾರೇಜ್ ಮಾಲೀಕರೇ ಕೊನೆಗೆ ಇದು ತುಕ್ಕು ಹಿಡಿದಿದೆ, ರಿಪೇರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿಬಿಡುತ್ತಾರೆ. ಇಂತಹ ತುಕ್ಕು ಹಿಡಿದ ಪ್ರಶ್ನೆಗಳನ್ನು ನೀವು ಕೇಳಬಾರದು. ತುಕ್ಕು ಹಿಡಿದವರ ಬಗ್ಗೆ ನಾನು ಮಾತನಾಡುವುದಿಲ್ಲ. ಇದರಿಂದ ಸಮಯ ವ್ಯರ್ಥವಾಗುತ್ತದೆ ಅಷ್ಟೇ,” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಮಾಧ್ಯಮದವರು ದೇಶ ಮತ್ತು ರಾಜ್ಯಕ್ಕೆ ಒಳಿತಾಗುವಂತಹ ಪ್ರಶ್ನೆಗಳನ್ನು ಕೇಳಬೇಕು ಎಂದು ಸಲಹೆ ನೀಡಿದ ಸಚಿವರು, “ನಿಮ್ಮ ಪ್ರಶ್ನೆಗಳು ಮೌಲ್ಯಯುತವಾಗಿರಬೇಕು. ದೇಶ ಮತ್ತು ರಾಜ್ಯಕ್ಕೆ ಒಳ್ಳೆಯದಾಗುವ ವಿಚಾರಗಳ ಬಗ್ಗೆ ಪ್ರಶ್ನೆ ಕೇಳಿ,” ಎಂದು ಹೇಳಿದರು.
previous post
