ಶಿವಮೊಗ್ಗ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಅವರ 62ನೆಯ ಹುಟ್ಟು ಹಬ್ಬವನ್ನು ಆ. 12ರಂದು ಸರಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದಸಂಸ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಬಸಪ್ಪ,
ಪ್ರೊ ಬಿ ಕೃಷ್ಣಪ್ಪ ನೇತೃತ್ವದ ದಲಿತ ಸಂಘರ್ಷ ಸಮಿತಿಯನ್ನು ಮುನ್ನಡೆಸುತ್ತಾ ಪ್ರಸ್ತುತ ರಾಜ್ಯ ಸಂಚಾಲಕರಾಗಿ ಸಂಘಟನೆಯನ್ನು ಬಲಪಡಿಸುತ್ತಿದ್ದಾರೆ. ಕರ್ನಾಟಕ ಕಲಿತ ಸಂಘರ್ಷ ಸಮಿತಿಯ ಹೆಸರು ದುರುಪಯೋಗವಾಗದಂತೆ ಹಾಗೂ ಪ್ರೊ ಬಿ.ಕೃಷ್ಣಪ್ಪನವರ ಅನುವಂತೆ ಸ್ಥಾಪಿತವಾದ ಮೂಲ ಸಂಘಟನೆಯೇ ಅಧಿಕೃತವೆಂದು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿ ಜಯಗಳಿಸಿದ್ದಾರೆ. ಪ್ರೊಬಿ ಕೃಷ್ಣಪ್ಪನವರ ವೈಚಾರಿಕ ದಾರಿಯಲ್ಲಿ ನಡೆದು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಶಿಕ್ಷಣ, ಸಂಘಟನೆ, ಹೋರಾಟ ಎಂಬ ತತ್ವವನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಬಂದವರು ಎಂದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಸಂಘಟನೆಯನ್ನು ಗಟ್ಟಿಗೊಳಿಸುತ್ತಾ ಯುವ ಪೀಳಿಗೆಗೆ ಮಾರ್ಗದರ್ಶನ ಎಂ ಗುರುಮೂರ್ತಿಯವರ ನಾಯಕತ್ವ ಎಂದರು.
ಹೋರಾಟಗಾರನ ಹುಟ್ಟುಹಬ್ಬವನ್ನು ಆಚರಿಸುವುದು ಎಂದರೆ ಅವರು ನಂಬಿರುವ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ಮಾಡುವ ದಿನವಾಗಬೇಕು ಎಂಬ ನಿಟ್ಟಿನಲ್ಲಿ ಮೆಗ್ಗಾನ್ ಆಸ್ಪತ್ರೆ ಮತ್ತು ಮಹಾನಗರಪಾಲಿಕೆಯ ಸುಮಾರು 200 ಮಹಿಳಾ ಕಾರ್ಮಿಕರಿಗೆ ತೆಂಗಿನಸಸಿ ಮತ್ತು ಸೀರೆಯನ್ನು ವಿತರಿಸಲಾಗುವುದು ಎಂದರು.
11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರದ ಅಧ್ಯಕ್ಷತೆಯನ್ನು ರಾಯಚೂರಿನ ದಸಂಸ ರಾಜ್ಯ ಸಂಚಾಲಕ ಹನುಮಂತಪ್ಪ ಕಾಕರಗಲ್ ವಹಿಸುವರು. ಮಾಜಿ ಎಂಪಿ ಆಯನೂರು ಮಂಜುನಾಥ ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಬಳ್ಳಾರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ತಿಪ್ಪೇಸ್ವಾಮಿ,ಜಿಲ್ಲಾ ಜಿಲ್ಲಾ ಅಧ್ಯಕ್ಷರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್, ಚಿತ್ರದುರ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಗದಗದ ಕೆ ಪಿ ಸಿಸಿ ಸದಸ್ಯೆ ಸುಜಾತ ದೊಡ್ಡಮನಿ, ಪತ್ರಕರ್ತರಾದ ಶಿವಕುಮಾರ್, ಹೊನ್ನಾಳಿ ಚಂದ್ರಶೇಖರ್, ನಿವೃತ್ತ ಪ್ರೊ. ಪ್ರಸನ್ನ ಕುಮಾರ್, ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಚಂದ್ರಪ್ಪ ಆಗಮಿಸುವರು. ಹನುಮಂತಪ್ಪ ಯಡವಾಲ, ಅಧ್ಯಕ್ಷ ತೆ ವಹಿಸುವರು.
ಅಭಿನಂದನಾ ಸ್ವೀಕಾರ ನುಡಿ ಯನ್ನು ಎಂ. ಗುರುಮೂರ್ತಿ ಆಡುವರೆಂದರು.
