ಶಿವಮೊಗ್ಗ: ಮನೆ-ಮನಗಳಲ್ಲಿ ಶ್ರಾವಣ ಚಿಂತನಕ್ಕೆ ಈಗ 49ರ ಸಂಭ್ರಮ ವಾಗಿದ್ದು, ಶರಣರ ಆಶಯಗಳನ್ನು ಮೌಲಿಕ ಚಿಂತನೆಗಳನ್ನು ಎಲ್ಲರ ಮನಗಳಲ್ಲಿ ಪುನಃ ಧ್ವನಿಸುವಂತೆ ಮಾಡುವ ಕಾರ್ಯಕ್ರಮವಾಗಿದೆ.ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ವರ್ಷ ಆ. 13ರಿಂದ ಸೆ. ೯ರವರೆಗೆ ನಗರದ ವಿವಿಧ ಗಣ್ಯರ ಮನೆಯಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪ್ರೊ. ಕೆ ವಿ ಶಶಧರ್, ವಚನಗಳಲ್ಲಿ ಆಧುನಿಕ ವೃತ್ತಿಜೀವನ ಮತ್ತು ವೈಯುಕ್ತಿಕ ಜೀವನ ನಿರ್ವಹಣೆಗೆ ಅಗತ್ಯವಾದ ವಸ್ತು ವಿಷಯಗಳಿರುವುದು ಸಹಜವಾಗಿ ಕಂಡುಬರುತ್ತದೆ. ಪ್ರಸ್ತುತದಲ್ಲಿ ಕಾಣಬರುವ ಕುಟುಂಬ ಜೀವನದಲ್ಲಿನ ಸಾಮರಸ್ಯದ ಕೊರತೆ, ಸಡಿಲವಾಗುತ್ತರುವ ಸಂಬಂಧಗಳು, ಈ ಕಾರಣಗಳಿಂದಾಗಿ ವೈಮನಸ್ಯ, ಸ್ವಚ್ಚ ನಡೆನುಡಿಗಳು ಕಳೆದುಹೋಗುತ್ತಿರು ಈ ದಿನಮಾನಗಳಲ್ಲಿ, ಜೀವನ ಮೌಲ್ಯ ಕಟ್ಟಿಕೊಟ್ಟ ಶರಣರ ಆಶಯ, ಜೀವನ ಕೌಶಲ್ಯ ಕಟ್ಟಿ ಕೊಟ್ಟ ರೀತಿನೀತಿಗಳು ಇಂದೂ ಸಹ ಪ್ರಸ್ತತವಾಗಿವೆ ಎಂದರು.
ಈ ಹಿನ್ನೆಲೆಯಲ್ಲಿ ಈ ಸಾಲಿನ ಶ್ರಾವಣ ಚಿಂತನ ವಚನಗಳಲ್ಲಿ ಜೀವನ ಕೌಶಲ್ಯಗಳ ಕುರಿತು ಮೌಲಿಕ ಚಿಂತನಾ ವೇದಿಕೆಯಾಗಲಿ ಎನ್ನುವ ಗುರುಗಳ ಆಶಯಹೊತ್ತು ಸಾಗಲಿದೆ. ಈ ಆಶಯಗಳನ್ನು ಮನೆ ಮನಗಳಲ್ಲಿ ಮಂಡಿಸಲು 30 ವಿಷಯತಜ್ಞರು ಸಿದ್ದವಾಗಿದ್ದಾರೆ ಹಾಗೂ ಅವುಗಳನ್ನು ಆಯೋಜಿಸಲು ಸೇವಾಕರ್ತರು ಸಿದ್ಧವಾಗಿದ್ದಾರೆ. ಕೃತಕ ಬುದ್ಧಿಮತ್ತೆಯಂತಹ ಆಧುನಿಕ ವಿಷಯಗಳಿಂದ ಪ್ರಾರಂಭಿಸಿ ಅತ್ಯಂತ ಪ್ರಾಚೀನ ಸಂಬಂಧಗಳಲ್ಲಿ ಒಂದಾದ ದಾಂಪತ್ಯದ ವರೆಗೆ, ಸಕಾರಾತ್ಮಕ ಚಿಂತನೆಯಿಂದ ಹಿಡಿದು ಹೊಂದಾಣಿಕೆಯವರೆಗೆ ಇಂದು ಕಾಣಬರುವ ಸಮಸ್ಯೆಗಳಿಗೆ, ವಚನ ಸಾಹಿತ್ಯದ ಸರಳತೆ ಹಾಗೂ ಸಂಸ್ಕೃತಿಯನ್ನು ಅಂತರಂಗ-ಬಹಿರಂಗಗಳಲ್ಲಿ ಮೇಲೈಸಿ ಇಂದಿನ ಪೀಳಿಗೆಗೆ ಉಣಬಡಿಸುವ ಪ್ರಯತ್ನ ಈ ಬಾರಿಯ ಶ್ರಾವಣ ಚಿಂತನದ ವಿಶೇಷ ಎಂದರು.
ದಿನಾಂಕ 13.8.2026 ರಿಂದ 9.9.2026ರವರೆಗೆ ಪ್ರತಿನಿತ್ಯ ಸಂಜೆ 6 ಗಂಟೆಯಿಂದ 8ಗಂಟೆಯವರೆಗೆ ನಡೆಯಲಿದೆ. ನಿತ್ಯ ವಚನ ಸಂಗೀತ, ಅಲ್ಲಮರಂಗ ವಚನ ರೂಪಕ, ಉಪನ್ಯಾಸ, ಸಂವಾದ, ಆಶೀರ್ವಚನ ಇರಲಿವೆ. ಪ್ರಾರಂಭದಲ್ಲಿ ಮಠದಲ್ಲಿ ಮಾತ್ರ ನಡೆಯುತ್ತಿದ್ದ ಶಾವಣ ಚಿಂತನ ಕ್ರಮೇಣ ವಿವಿಧ ಬಡಾವಣೆಗೆ ಸಾಗಿ, ಇತ್ತೀಚೆಗೆ ಮನೆಮನೆಗಳಲ್ಲಿ ನಡೆಯತ್ತಿದೆ. ಕಳೆದ 48 ವರ್ಷಗಳಿಂದ ವೈವಿಧ್ಯಮಯ ವಿಷಯಗಳನ್ನು ಕೇಂದ್ರವಾಗಿರಿಸಿಕೊಂಡು ಚಿಂತನ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಈ ಶ್ರಾವಣವೂ ಇವೆಲ್ಲವು ಕ್ಕಿಂತ ಬಿನ್ನ ಹಾಗೂ ಇಂದಿಗೆ ಅಗತ್ಯವಾದ ವಿಷಯ ಹೊತ್ತು ಮನೆ ಮನಗಳತ್ತ ಸಾಗಲು ಸಿದ್ಧವಾಗಿದೆ. ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಸ್ಪಂದಿಸಿ ಇಂದಿನ ಜೀವನದ ಸವಾಲುಗಳಿಗೆ ವಚನ ಉತ್ತರ ಕಂಡುಕೊಂಡುವಂತಾಗಲಿ ಎನ್ನುವುದು ಗುರುಗಳ ಆಶಯ. ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 13-8-2026ರಂದು ನಡೆಯಲಿದೆ.
ಎಂ.ವಿ ಧನಂಜಯ್, ಕುಲಪತಿಗಳು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಿವಮೊಗ್ಗ ನೆರವೇರಿಸಲಿದ್ದಾರೆ. ಶರಣ ಎಸ್.ಜಿ ಶಶಿಧರ ಅಧ್ಯಕ್ಷರು ವಿದ್ಯುತ್ ಇಲಾಖೆ ವೀಲಿಂನೌಕ್ಷೇಸಂ ಶಿವಮೋಗ್ಗ ಅಧ್ಯಕ್ಷತೆ ವಹಿಸಲಿದ್ದಾರೆ. ಶರಣ ರಾಜೇಂದ್ರ ಚೆನ್ನಿ ಪ್ರಧಾನ ಉಪನ್ಯಾಸ ನೀಡಲಿದ್ದು ಸಾನಿಧ್ಯವನ್ನು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವಹಿಸಲಿದ್ದಾರೆ ಎಂದರು.
ಉದ್ಘಾಟನಾ ಸಮಾರಂಭವು ಗುರುಬಸಬ ಭವನ, ಬೆಕ್ಕಿನಕಲ್ಮಠದಲ್ಲಿ ನಡೆಯಲಿದೆ. ನಂತರ ಪ್ರತಿದಿನ ಒಬ್ಬ ಭಕ್ತ ರ ಮನೆಯಲ್ಲಿ ಉಪನ್ಯಾಸ ಒಂದು ತಿಂಗಳ ಕಾಲ ನಡೆಯಲಿದೆ ಎಂದರು.
