ಜನ ನೋಟ
ಶಿವಮೊಗ್ಗ

ಸೆ. ೫ ರಿಂದ ಎರಡು ದಿನ ‘ಶ್ರಾವಣ ಸಂಭ್ರಮ’ ವಸ್ತು ಪ್ರದರ್ಶನ

ಶಿವಮೊಗ್ಗ: ಈಗಲ್ ಐ ಎಂಟರ್‌ಪ್ರೈಸಸ್ ವತಿಯಿಂದ ‘ಶ್ರಾವಣ ಸಂಭ್ರಮ-೨೦೨೬’ ಹೆಸರಿನಲ್ಲಿ ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಸೆ. ೫ ಮತ್ತು ೬ರಂದು ನಗರದ ಗೋಪಾಳದಲ್ಲಿರುವ ಶ್ರೀ ಯೋಗಿ ನಾರಾಯಣ ಬಲಿಜ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕಿ ಸಂಗೀತಾ ತಿಳಿಸಿದರು.

ಶುಕ್ರವಾರ ಪ್ರೆಸ್ ಟ್ರಸ್ಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ೧೦ರಿಂದ ರಾತ್ರಿ ೯ರವರೆಗೆ ನಡೆಯುವ ಪ್ರದರ್ಶನದಲ್ಲಿ ವೈವಿಧ್ಯಮಯ ಸೀರೆಗಳು, ಗೃಹಾಲಂಕಾರಿಕ ವಸ್ತುಗಳು, ಅಪರೂಪದ ಉತ್ಪನ್ನಗಳು ಹಾಗೂ ಸಾಂಪ್ರದಾಯಿಕ ಆಹಾರ ಮಳಿಗೆಗಳು ಇರಲಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದರು.

ಸೆ. ೬ರಂದು ಸಂಜೆ ಮಕ್ಕಳಿಗಾಗಿ ರಾಧಾ-ಕೃಷ್ಣ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದ್ದು, ೨ರಿಂದ ೧೦ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ವಿಶೇಷವಾಗಿ ಸಿದ್ಧಗೊಂಡು ಬರುವ ಮಹಿಳೆಯರಲ್ಲಿ ಅತ್ಯುತ್ತಮ ಮೂವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿದರು.

ಗೋಪಾಳದ ಗುಡ್‌ಲಕ್ ಸರ್ಕಲ್ ಸಮೀಪದ ಲಗಾನ್ ಮಂದಿರದ ಕ್ರಾಸ್‌ನಲ್ಲಿರುವ ಶ್ರೀ ಯೋಗಿ ನಾರಾಯಣ ಬಲಿಜ ಸಮುದಾಯ ಭವನದಲ್ಲಿ ಪ್ರದರ್ಶನ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ೯೭೩೧೯ ೧೨೨೭೩, ೯೩೮೦೯ ೬೨೬೯೦ ಸಂಪರ್ಕಿಸಬಹುದು.

ಮಾಜಿ ಉಪಮೇಯರ್ ಲಕ್ಷ್ಮೀ ಶಂಕರ್ ನಾಯ್ಕ್, ಈಗಲ್ ಐ ಸಂಸ್ಥೆಯ ಉಪಾಧ್ಯಕ್ಷೆ ಮೇಘನಾ ಹಾಗೂ ಗಾಯತ್ರಿ ಉಪಸ್ಥಿತರಿದ್ದರು.

Related posts

ಧರಣಿ ನಿಲ್ಲಿಸಲು ಮನವಿ: ಮನವೊಲಿಕೆ ವಿಫಲ

JanaNota Editor

ಗ್ರಾಮೀಣ ಮಕ್ಕಳಿಗೆ ಅಕ್ಷರ ದೀವಿಗೆ : ರಾಷ್ಟ್ರಮಟ್ಟದಲ್ಲಿ ಮಿಂಚಿದ ಹೊಸನಗರದ ಶಿಕ್ಷಕಿ

JanaNota Editor

ಸಾಗರ ಬಸ್ಸಿನಲ್ಲಿ ಗಾಢ ನಿದ್ರೆಗೆ ಜಾರಿದ ಮಹಿಳೆ: 17 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

JanaNota Editor