ಶಿವಮೊಗ್ಗ: ನಿನ್ನೆಯ ಘಟನೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಂಗೇಗೌಡ-ಪಾಲಿಕೆಯ ಮಾಜಿ ಸದಸ್ಯೆ ಯಮುನಾ ರಂಗೇಗೌಡ ನೇತೃತ್ವದಲ್ಲಿ ಅವರ ಬೆಂಬಲಿಗರು ಕಾಂಗ್ರೆಸ್ ಕಛೇರಿ ಎದುರು ಧರಣಿ ಕುಳಿತು ಕ್ಷಮಾಪಣೆ ಕೇಳುವಂತೆ ಆಗ್ರಹಿಸುತ್ತಿದ್ದಾರೆ.
ಕಲೀಂ ಪಾಷಾ ಬೆಂಬಲಿಗರ ವರ್ತನೆಯಿಂದ ಬೇಸರವಾಗಿದೆ. ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಕಲೀಂ ಪಾಷಾ ಬೆಂಬಲಿಗರ ವರ್ತನೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ. ಕೂಡಲೇ ಕ್ಷಮಾಪಣೆ ಕೇಳುವಂತೆ ಧರಣಿ ನಿರತ ಮುಖಂಡರು ಆಗ್ರಹಿಸುತ್ತಿದ್ದಾರೆ.
ಮನವೊಲಿಕೆಗೆ ಯತ್ನ ವಿಫಲ
ಕಾಂಗ್ರೆಸ್ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸುತ್ತಿರುವ ಮುಖಂಡ ರಂಗೇಗೌಡ ಹಾಗೂ ಯುಮನಾ ರಂಗೇಗೌಡರ ಮನವೊಲಿಸಲು ಕಾಂಗ್ರೆಸ್ ಪಕ್ಷದ ಮುಖಂಡರು ಯತ್ನಿಸಿದ ಪ್ರಯತ್ನ ವಿಫಲವಾಗಿದೆ.
ಕಾಂಗ್ರೆಸ್ ಮುಖಂಡರಾದ ಹೆಚ್.ಸಿ ಯೋಗೇಶ್,ಆದರ್ಶ ಹುಂಚದಕಟ್ಟೆ ಸೇರಿದಂತೆ ಹಲವರು ಮುಖಂಡರು ಧರಣಿ ಕೈ ಬಿಡುವಂತೆ ಮನವಿ ಮಾಡಿದರು.
