ಗದಗ: ಸಿಎಂ ಡಿಕೆ ಶಿವಕುಮಾರ್ ಅವರು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರದ ಲಿಂಗೈಕ್ಯ ವೀರಗಂಗಾಧರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದು ಪೂಜೆ ಪ್ರಾರ್ಥನೆ ಸಲ್ಲಿಸಿದರು.
ಮುಖ್ಯಮಂತ್ರಿ ಆಗಬೇಕೆಂಬ ತಮ್ಮ ಪ್ರಾರ್ಥನೆ ಈಡೇರಿದ ಹಿನ್ನಲೆ ಮುಕ್ತಿ ಮಂದಿರದಲ್ಲಿ ಅರ್ಧ ಗಂಟೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಸಿಎಂ, ಗದಗ ಜಿಲ್ಲೆಗೆ ಬರಗಾಲದ ಪ್ರವಾಸಕ್ಕೆ ಬಂದಿದ್ದೆ. ರಾಜ್ಯಾದ್ಯಂತ ಮಳೆ ಬೆಳೆ ಆಗಬೇಕು. ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು ಬರ ಇದೆ, ಹೀಗಾಗಿ ಇಲ್ಲೇ ಬರಬೇಕು ಅಂತ ಬಂದಿದ್ದೀನಿ ಎಂದರು.
ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಜ್ಜಯ್ಯ, ಡಿಕೆಶಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಡಿಕೆಶಿ ಮುಖ್ಯಮಂತ್ರಿ ಸ್ಥಾನದ ಕುರಿತಂತೆ ನೊಣವಿನಕೆರೆ ಅಜ್ಜಯ್ಯ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. 2028 ರಿಂದ ಮುಂದಿನ 8-10 ವರ್ಷಗಳ ಕಾಲ ಡಿಕೆಶಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಅಂತ ನೊಣವಿನಕೆರೆ ಅಜ್ಜಯ್ಯ ಹೇಳಿದ್ದಾರೆ. ಡಿಕೆಶಿ ಪೂಜೆ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಈ ಭವಿಷ್ಯ ನುಡಿದರು.
ಡಿಕೆ ಶಿವಕುಮಾರ್ ಆರೋಗ್ಯ, ಆಯುಷ್ಯ ಹಾಗೂ ಮುಂದಿನ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದಾರೆ. ಅಷ್ಟೋತ್ತರ ಪೂಜೆ, ಆರೋಗ್ಯ ಭಾಗ್ಯದ ಸಂಕಲ್ಪ ಮಾಡಿದ್ದಾರೆ. ರಾಜಾ ಪ್ರತ್ಯಕ್ಷ ದೇವತಾ ಮುಂದಿನ 2028 ರಿಂದ ಆಳ್ವಿಕೆಯಲ್ಲಿ ಡಿಕೆಶಿ ಇರುವಂತೆ ಪೂಜೆ ಮಾಡಲಾಗಿದೆ ಅಂತ ಹೇಳಿದ್ರು.
