ಜನ ನೋಟ
ಕ್ರೈಂ ನ್ಯೂಸ್

ಕಾರಿಗೆ ಟಚ್ ಆಗಿದ್ದನ್ನು ಪ್ರಶ್ನಿಸಿದಕ್ಕೆ ಶಿವಮೊಗ್ಗದ ಉದ್ಯಮಿ ಒಬ್ಬರಿಗೆ ಹಲ್ಲೆ, ಸುಲಿಗೆ

ವರದಿ: ಸನತ್ ಶಿವಮೊಗ್ಗ 

 

ಶಿವಮೊಗ್ಗ : ನಗರದಲ್ಲಿ ಕಾರಿಗೆ ಬೈಕ್ ಡಿಕ್ಕಿ ಹೊಡೆದದ್ದನ್ನು ಪ್ರಶ್ನಿಸಿದ ಉದ್ಯಮಿಯೊಬ್ಬರ ಮೇಲೆ ಅಪರಿಚಿತ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಬ್ಬಿಣದ ಪಂಚ್‌ನಿಂದ ಹಲ್ಲೆ ನಡೆಸಿ ಸುಲಿಗೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ FIR ಆಗಿದೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಉದ್ಯಮಿಯೊಬ್ಬರು ತಮ್ಮ ಕಾರಿನಲ್ಲಿ ಕುವೆಂಪು ರಸ್ತೆಯಲ್ಲಿ ಬರುತ್ತಿದ್ದಾಗ, ಪೆಟ್ರೋಲ್ ಬಂಕ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ಬಂದ ಇಬ್ಬರು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಬಳಿಕ ಕಾರನ್ನು ಬದಿಗೆ ನಿಲ್ಲಿಸುವಂತೆ ಹೇಳಿ, ಉದ್ಯಮಿಯ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಈ ವೇಳೆ ಅಲ್ಲಿಗೆ ಟ್ರಾಫಿಕ್ ಪೊಲೀಸರು ಬಂದಿದ್ದು, ನಂಬರ್ ಪ್ಲೇಟ್ ಇಲ್ಲದಿರುವುದು ವಿಚಾರಿಸಿ ಬೈಕ್ ಕೀ ತಗೆದುಕೊಳ್ಳಲು ಮುಂದಾದಾಗ ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಬಳಿಕ ಅದೇ ದಿನ ಸಂಜೆ, ಪುನಃ ಉದ್ಯಮಿಯ ಕಾರನ್ನ ಅಡ್ಡಗಟ್ಟಿದ ಆರೋಪಿಗಳು ಪೊಲೀಸರು ನಮ್ಮ ಗಾಡಿ ಕೀ ತೆಗೆದುಕೊಂಡು ಹೋಗಿದ್ದಾರೆ, ಹೊಸ ಕೀ ಮಾಡಿಸಿಕೊಡು, ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಕಬ್ಬಿಣದ ಪಂಚ್‌ನಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೆ ಅವರ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಲು ಮುಂದಾಗಿದ್ದಾರೆ. ಬಳಿಕ ಕಾರಿನ ಕೀ ಕಸಿದುಕೊಂಡು, ಉದ್ಯಮಿ ಬಳಿಯಿದ್ದ 11000 ರೂಪಾಯಿ ದೋಚಿದ್ದಾರೆ. ಈ ವೇಳೆ ಜನ ಸೇರಿದ್ದರಿಂದ ಎಸ್ಕೇಪ್ ಆಗಿದ್ದಾರೆ. ಗಾಯಗೊಂಡಿದ್ದ ಉದ್ಯಮಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ನೀಡಿದ ಹೇಳಿಕೆ ಆಧರಿಸಿ ಕೇಸ್ ದಾಖಲಿಸಲಾಗಿದೆ.

Related posts

ಶಿವಮೊಗ್ಗ : ಚೆಸ್ ಆಟ ವೀಕ್ಷಿಸುತ್ತಾ ಕುಳಿತಿದ್ದ 10ನೇ ತರಗತಿ ವಿದ್ಯಾರ್ಥಿ ಕುಸಿದು ಬಿದ್ದು ಸಾವು

JanaNota Editor

ಶಿವಮೊಗ್ಗದಲ್ಲಿ ಮೂವರು ಮಕ್ಕಳೊಂದಿಗೆ ಹೊಳೆಗೆ ಹಾರಿದ ಮಹಿಳೆ

JanaNota Editor

ಪುರದಾಳು ಡ್ಯಾಮ್ಗೆ ತೆರಳಿದ್ದ ವಿದ್ಯಾರ್ಥಿನಿಯ ಚಿನ್ನದ ಸರ ಕಸಿದು ಪರಾರಿಯಾದ ದುಷ್ಕರ್ಮಿ

JanaNota Editor