ಜನ ನೋಟ
ಶಿವಮೊಗ್ಗ

ಬಂಗಾರಪ್ಪ ಜನ್ಮದಿನೋತ್ಸವ: ನಾಲ್ವರಿಗೆ ಪ್ರತಿಷ್ಠಿತ ಬಂಗಾರ ಪ್ರಶಸ್ತಿ ಪ್ರದಾನ

ಸೊರಬ : ಸಮಾಜವಾದಿ ಚಿಂತಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 94ನೇ ಜನ್ಮದಿನೋತ್ಸವವನ್ನು ಸೊರಬದ ಬಂಗಾರಧಾಮದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಎಸ್. ಬಂಗಾರಪ್ಪ ಫೌಂಡೇಶನ್ ಹಾಗೂ ಎಸ್. ಬಂಗಾರಪ್ಪ ವಿಚಾರ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ವರಿಗೆ ಪ್ರತಿಷ್ಠಿತ ಬಂಗಾರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ್ರೊ. ನಟರಾಜ್ ಹುಳಿಯಾರ್ ಅವರಿಗೆ ಸಾಹಿತ್ಯ ಬಂಗಾರ ಪ್ರಶಸ್ತಿ, ರಂಗಭೂಮಿ ಕ್ಷೇತ್ರದ ಶೇಖ್ ಮಾಸ್ತರ್ ಅವರಿಗೆ ರಂಗ ಬಂಗಾರ ಪ್ರಶಸ್ತಿ, ಸೇವಾ ಕ್ಷೇತ್ರದ ಪ್ರೊ. ಜಿ.ಎಸ್. ಜಯದೇವ ಅವರಿಗೆ ಸೇವಾ ಬಂಗಾರ ಪ್ರಶಸ್ತಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಿ.ಸಿ. ರಮೇಶ್ ಅವರಿಗೆ ಕ್ರೀಡಾ ಬಂಗಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಕಾರ್ಯಕ್ರಮ ಉದ್ಘಾಟಿಸಿದರು. ಸಣ್ಣ ನೀರಾವರಿ ಸಚಿವ ಅಜಯ್ ಧರ್ಮಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, “ನಾನು ಒಬ್ಬ ಬಂಗಾರಪ್ಪ ಅವರನ್ನು ಕಳೆದುಕೊಂಡಿರಬಹುದು. ಆದರೆ ಲಕ್ಷಾಂತರ ಬಂಗಾರಪ್ಪರನ್ನು ಪಡೆದುಕೊಂಡಿದ್ದೇನೆ. ಜನರ ಪ್ರೀತಿ ಮತ್ತು ಅಭಿಮಾನದಲ್ಲಿ ಅವರು ಇಂದಿಗೂ ಜೀವಂತವಾಗಿದ್ದಾರೆ” ಎಂದು ಹೇಳಿದರು.

ಎಸ್. ಬಂಗಾರಪ್ಪ ಅವರ ಸ್ಮರಣಾರ್ಥ 2012ರಿಂದ ನಿರಂತರವಾಗಿ ಬಂಗಾರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಜನ್ಮದಿನೋತ್ಸವದ ಅಂಗವಾಗಿ ಜಾನಪದ ಝೇಂಕಾರ ಹಾಗೂ ‘ಎದೆ ತುಂಬಿ ಹಾಡುವೆನು’ ರಸಮಂಜರಿ ಕಾರ್ಯಕ್ರಮವೂ ನಡೆಯಿತು.

Related posts

ಶಿವಮೊಗ್ಗದಲ್ಲಿ ರಂಗ ದಸರಾ ಸಂಭ್ರಮ: 39 ಕಾರ್ಯಕ್ರಮ, 25 ನಾಟಕಗಳ ಪ್ರದರ್ಶನ

JanaNota Editor

ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಅ.11ರಿಂದ 21ರವರೆಗೆ ನವರಾತ್ರಿ

JanaNota Editor

ಶಿವಮೊಗ್ಗ : ಸೂಡಾ ಅಧ್ಯಕ್ಷರಾಗಿ ಸಿ.ಜಿ. ಮಧುಸೂದನ್ ಅಧಿಕಾರ ಸ್ವೀಕಾರ

JanaNota Editor