ಜನ ನೋಟ
ಕ್ರೈಂ ನ್ಯೂಸ್

ಶಿವಮೊಗ್ಗ ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಾಚರಣೆ : ನಂಬರ್ ಪ್ಲೇಟ್ ಇಲ್ಲದ 72 ದ್ವಿಚಕ್ರ ವಾಹನ ವಶ!

ವರದಿ: ಸನತ್ ಶಿವಮೊಗ್ಗ

 

ಶಿವಮೊಗ್ಗ : ನಂಬರ್ ಪ್ಲೇಟ್ ಇಲ್ಲದೆ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ, ಶಿವಮೊಗ್ಗ ಟ್ರಾಫಿಕ್ ಪೊಲೀಸರು ದಿಡೀರ್ ಕಾರ್ಯಾಚರಣೆ ಮೂಲಕ ಶಾಕ್ ನೀಡಿದ್ದಾರೆ.

ಅಕ್ಟೋಬರ್ 26 ರಂದು ಸಂಚಾರ ಸುರಕ್ಷತೆಗೆ ಸಂಬಂಧಿಸಿದಂತೆ, ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ಈ ವೇಳೆ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ 72 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಂಬರ್ ಪ್ಲೇಟ್ ಇಲ್ಲದೆ ಬೈಕ್ ಓಡಿಸುತ್ತಿದ್ದ ಚಾಲಕರು / ಮಾಲೀಕರ ವಿರುದ್ದ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ದ್ವಿಚಕ್ರ ವಾಹನಗಳಿಗೆ ಮಾನ್ಯತೆ ಹೊಂದಿದ ನಂಬರ್ ಪ್ಲೇಟ್ ಅಳವಡಿಸಿ ಚಲಾಯಿಸಬೇಕು ಎಂದು ಸೂಚಿಸಿದ್ದಾರೆ. ಟ್ರಾಫಿಕ್ ಇನ್ಸ್’ಪೆಕ್ಟರ್ ದೇವರಾಜ್ ಅವರ ನೇತೃತ್ವದಲ್ಲಿ ಸದರಿ ಕಾರ್ಯಾಚರಣೆ ನಡೆಸಲಾಗಿದೆ.

Related posts

ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧೆಡೆ ಅಪರಾಧ ಪ್ರಕರಣಗಳು

JanaNota Editor

ತಾಯಿಗಾಗಿ ಬದುಕು ಎಂದು ಅಂಗಲಾಚಿದರೂ ಐಫೋನ್ ಗಾಗಿ ಸಾವನ್ನಪ್ಪಿದ ಯುವಕ

JanaNota Editor

ಸಾಗರ ಬಸ್ಸಿನಲ್ಲಿ ಗಾಢ ನಿದ್ರೆಗೆ ಜಾರಿದ ಮಹಿಳೆ: 17 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

JanaNota Editor