ಜನ ನೋಟ
Headlines

ಕಾರ್ ಪಾರ್ಕಿಂಗ್ ವಿಚಾರಕ್ಕೆ ಜಗಳ; ಮನಬಂದಂತೆ ಗುಂಡಿನ ದಾಳಿ, ಮೂವರ ಭೀಕರ ಹತ್ಯೆ

ಲಖನೌ: ಲಖನೌದ ಖಾಲಿ ನಿವೇಶನವೊಂದರಲ್ಲಿ ಕಾರು ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಜಗಳ ಮೂವರ ಕೊಲೆಯಲ್ಲಿ ಅಂತ್ಯವಾದ ಆಘಾತಕಾರಿ ಘಟನೆ ಸೋಮವಾರ ನಡೆದಿದೆ.

ಲಖನೌನ ಸಾದತ್‌ಗಂಜ್ ಪ್ರದೇಶದಲ್ಲಿ ಕಾರು ನಿಲ್ಲಿಸುವ ವಿಚಾರಕ್ಕೆ ಜಗಳ ಆರಂಭವಾಗಿದ್ದು, ಈ ವೇಳೆ, ವ್ಯಕ್ತಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದರಿಂದ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯು ನೌಬಸ್ತಾದ ಬ್ರಾಹ್ಮಣಿ ಟೋಲಾ ಪ್ರದೇಶದಲ್ಲಿ ನಡೆದಿದೆ. ಜಗಳದ ವೇಳೆ ರಿಷಭ್ ಶುಕ್ಲಾ (30) ಎಂಬಾತ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಶಿವಾಜಿ ತಿವಾರಿ(62), ಶಿವೇಂದ್ರ ತಿವಾರಿ (55) ಮತ್ತು ಸುಯಶ್ ತಿವಾರಿ (30) ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕಿಂಗ್ ಜಾರ್ಜ್ಸ್ ಮೆಡಿಕಲ್ ಯೂನಿವರ್ಸಿಟಿ(KGMU) ಟ್ರೌಮಾ ಸೆಂಟರ್‌ಗೆ ತುರ್ತಾಗಿ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಅಪರಾಧಕ್ಕೆ ಬಳಸಿದ ಪಿಸ್ತೂಲ್ ಮತ್ತು ನಾಲ್ಕು ಖಾಲಿ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೃತಪಟ್ಟವರ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ, ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಉಡುಪಿಯಲ್ಲಿ ಗುಂಡಿಕ್ಕಿ ಕಾಂಗ್ರೆಸ್‌ ಮುಖಂಡ, ಗ್ರಾಪಂ ಮಾಜಿ ಅಧ್ಯಕ್ಷನ ಕೊಲೆ

JanaNota Editor

ಮೊದಲ ದಿನವೇ ಅಬ್ಬರಿಸಿ, ಬೊಬ್ಬಿರಿದ ʻಜೈಲರ್‌ 2ʼ : ವಿಶ್ವಾದ್ಯಂತ 125+ ಕೋಟಿ ಕಲೆಕ್ಷನ್‌

JanaNota Editor

ದೃಶ್ಯಂ ಸಿನಿಮಾ ವೀಕ್ಷಿಸಿ ತಂದೆಯನ್ನೇ ಕೊಂದ ಪುತ್ರ: ಹತ್ಯೆ ಮಾಡಲೆಂದೇ 2,000 ಕಿ.ಮೀ ಪ್ರಯಾಣ, ಆರೋಪಿ ಸಿಕ್ಕಿ ಬಿದ್ದಿದ್ದೇ ರೋಚಕ

JanaNota Editor