ಜನ ನೋಟ
ಕ್ರೀಡೆ

ರೊನಾಲ್ಡೊ–ಜಾರ್ಜಿನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಪೋರ್ಚುಗಲ್: ಹಲವು ವರ್ಷಗಳಿಂದ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಜಾರ್ಜಿನಾ ರೊಡ್ರಿಗಸ್ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಗಸ್ಟ್ 11ರಂದು ಪೋರ್ಚುಗಲ್‌ನ ಕ್ಯಾಸ್ಕೈಸ್‌ನಲ್ಲಿ ನಡೆದ ಖಾಸಗಿ ನಾಗರಿಕ ಸಮಾರಂಭದಲ್ಲಿ 41 ವರ್ಷದ ರೊನಾಲ್ಡೊ ಹಾಗೂ 32 ವರ್ಷದ ಜಾರ್ಜಿನಾ ವಿವಾಹವಾದರು. ಐವರು ಮಕ್ಕಳ ಸಮ್ಮುಖದಲ್ಲಿ ನಡೆದ ವಿವಾಹದ ಬಳಿಕ, ಇಬ್ಬರೂ ತಮ್ಮ ವಿವಾಹದ ಉಂಗುರಗಳ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯನ್ನು ದೃಢಪಡಿಸಿದ್ದಾರೆ.

ರೊನಾಲ್ಡೊ–ಜಾರ್ಜಿನಾ ಮದುವೆ ಕುರಿತು ಹಲವು ವರ್ಷಗಳಿಂದ ವದಂತಿಗಳು ಹರಿದಾಡುತ್ತಿದ್ದವು. ಇತ್ತೀಚೆಗೆ ಮಡೈರಾದ ಕ್ಯಾಥೆಡ್ರಲ್‌ನಲ್ಲಿ ಮದುವೆಯಾಗಲಿದ್ದಾರೆ ಎಂಬ ವದಂತಿಯಿಂದ ನೂರಾರು ಅಭಿಮಾನಿಗಳು ಅಲ್ಲಿ ಸೇರಿದ್ದರು. ಆದರೆ ಅಲ್ಲಿ ಮತ್ತೊಬ್ಬ ಜೋಡಿಯ ವಿವಾಹ ನಡೆದಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

2016ರಲ್ಲಿ ಗುಸ್ಸಿ ಮಳಿಗೆಯಲ್ಲಿ ಭೇಟಿಯಾದ ರೊನಾಲ್ಡೊ ಮತ್ತು ಜಾರ್ಜಿನಾ ಬಳಿಕ ಪ್ರೀತಿಯಲ್ಲಿ ಬಿದ್ದರು. 2025ರ ಆಗಸ್ಟ್ 11ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಸರಿಯಾಗಿ ಒಂದು ವರ್ಷದ ಬಳಿಕ ವಿವಾಹವಾಗುವ ಮೂಲಕ ಹಲವು ವರ್ಷಗಳ ಕುತೂಹಲಕ್ಕೆ ತೆರೆ ಎಳೆದಿದೆ.

ಐವರು ಮಕ್ಕಳ ಸುಂದರ ಕುಟುಂಬ

ರೊನಾಲ್ಡೊ ಮತ್ತು ಜಾರ್ಜಿನಾ ದಂಪತಿಗೆ ಅಲಾನಾ ಹಾಗೂ ಬೆಲ್ಲಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ರೊನಾಲ್ಡೊ ಅವರ ಹಿರಿಯ ಪುತ್ರ ಕ್ರಿಸ್ಟಿಯಾನೊ ಜೂನಿಯರ್ ಹಾಗೂ ಅವಳಿ ಮಕ್ಕಳಾದ ಇವಾ ಮಾರಿಯಾ ಮತ್ತು ಮ್ಯಾಟಿಯೊ ಅವರನ್ನೂ ಇಬ್ಬರೂ ಬೆಳೆಸುತ್ತಿದ್ದಾರೆ.

Related posts

ಆ. 22, 23 : ಶಿವಮೊಗ್ಗ ದಲ್ಲಿ 7ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ

JanaNota Editor

ಜವಾಹರ್ ನವೋದಯ ವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ : ರಾಷ್ಟ್ರಮಟ್ಟಕ್ಕೆ ಐವರು ಆಯ್ಕೆ

JanaNota Editor

ಅವಳಿ ಸಹೋದರರ ಷಟಲ್‌ ಸಾಧನೆಗೆ ರಾಷ್ಟ್ರಮಟ್ಟದ ಮೆಚ್ಚುಗೆ

JanaNota Editor