ಜನ ನೋಟ
ಕ್ರೀಡೆ

ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ದಾಖಲೆ : ಟ್ರ್ಯಾಪ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ನೀರೂ ಧಾಂಡಾ

ನಗೋಯಾ : ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತದ ನೀರೂ ಧಂಡಾ ಇತಿಹಾಸ ನಿರ್ಮಿಸಿದರು.

ಕ್ರೀಡಾಕೂಟದ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ವೈಯಕ್ತಿಕ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮಂಗಳವಾರ ನಡೆದ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹರಿಯಾಣದ 26 ವರ್ಷದ ಈ ಶೂಟರ್‌, ಎಂಟು ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ 28 ಅಂಕಗಳನ್ನು ಗಳಿಸುವ ಮೂಲಕ 24 ಅಂಕಗಳ ಹಿಂದಿನ ಏಷ್ಯನ್ ದಾಖಲೆಯನ್ನು ಮುರಿದು ಚಿನ್ನದ ಪದಕವನ್ನು ಗೆದ್ದುಕೊಂಡರು. ಅಂತಿಮ ಹಂತದವರೆಗೂ ಅಗ್ರಸ್ಥಾನವನ್ನು ಕಾಯ್ದುಕೊಂಡರು.

ಈ ಸ್ಪರ್ಧೆಯ ಆರಂಭದಲ್ಲಿ ಮಹಿಳೆಯರ ಟ್ರಾಪ್ ತಂಡದ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆಲ್ಲಲು ನೆರವಾದ ನಂತರ ನೀರೂ ಈ ಜಯವನ್ನು ಸಾಧಿಸಿದರು. 1978ರ ಕ್ರೀಡಾಕೂಟದಲ್ಲಿ ಪುರುಷರ ವೈಯಕ್ತಿಕ ಟ್ರಾಪ್ ವಿಭಾಗದಲ್ಲಿ ರಣಧೀರ್ ಸಿಂಗ್ ಭಾರತಕ್ಕೆ ಐತಿಹಾಸಿಕ ವೈಯಕ್ತಿಕ ಚಿನ್ನದ ಪದಕವನ್ನು ತಂದುಕೊಟ್ಟಿದ್ದರು.

ಹಾಗೆಯೇ, 2010ರ ಆವೃತ್ತಿಯಲ್ಲಿ ರೋಂಜನ್ ಸೋಧಿ ಪುರುಷರ ಡಬಲ್ ಟ್ರಾಪ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಆದರೆ ಮಹಿಳಾ ವಿಭಾಗದಲ್ಲಿ ಚಿನ್ನ ಜಯಿಸಿರಲಿಲ್ಲ. ಇದೀಗ ನೀರೂ ಈ ಸಾಧನೆ ಮಾಡಿದ್ದಾರೆ.

ತಮ್ಮ ಮೊದಲ ಐದೂ ಶಾಟ್‌ಗಳನ್ನು ಗುರಿಪಡಿಸಿದ ಅವರು, ಆರಂಭಿಕ 10 ಶಾಟ್‌ಗಳ ಪೈಕಿ ಒಂಬತ್ತರಲ್ಲಿ ಯಶಸ್ವಿಯಾದರು. ನಂತರದ ಐದು ಶಾಟ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು, ಪದಕದ ಸುತ್ತಿನಲ್ಲಿ ತಮ್ಮ ಹಿಡಿತವನ್ನು ಕಾಯ್ದುಕೊಂಡರು. ಒಟ್ಟು 30 ಶಾಟ್‌ಗಳಲ್ಲಿ 27 ಹಿಟ್‌ಗಳನ್ನು ದಾಖಲಿಸಿ ಅಂತಿಮವಾಗಿ ಚಿನ್ನದ ಪದಕವನ್ನು ಗೆದ್ದುಕೊಂಡರು.

Related posts

ಆ. 22, 23 : ಶಿವಮೊಗ್ಗ ದಲ್ಲಿ 7ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ

JanaNota Editor

ಅವಳಿ ಸಹೋದರರ ಷಟಲ್‌ ಸಾಧನೆಗೆ ರಾಷ್ಟ್ರಮಟ್ಟದ ಮೆಚ್ಚುಗೆ

JanaNota Editor

ಜವಾಹರ್ ನವೋದಯ ವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ : ರಾಷ್ಟ್ರಮಟ್ಟಕ್ಕೆ ಐವರು ಆಯ್ಕೆ

JanaNota Editor