ಜನ ನೋಟ
ರಾಜ್ಯ

ಕರ್ನಾಟಕ SIR: 1.07 ಕೋಟಿ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್

ಬೆಂಗಳೂರು: ಕರ್ನಾಟಕದಲ್ಲಿ ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮುಕ್ತಾಯಗೊಂಡಿದ್ದು ರಾಜ್ಯದಲ್ಲಿ ಬರೋಬ್ಬರಿ 1,07,96,339 ಮತದಾರರ ಹೆಸರು ಡಿಲೀಟ್ ಆಗಿದೆ.

ಇಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು, ರಾಜ್ಯದಲ್ಲಿ 1 ಕೋಟಿ, 7 ಲಕ್ಷ ಮತದಾರರ ಹೆಸರು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದರು. 5,54,32,314 ಮತದಾರರ ಹೆಸರು ಉಳಿದುಕೊಂಡಿದೆ ಎಂದರು.

ಶಾಶ್ವತವಾಗಿ ಸ್ಥಳಾಂತರವಾದವರ ಸಂಖ್ಯೆ 65,45,679 ಇದೆ. SIR ಪ್ರಕ್ರಿಯೆಯಲ್ಲಿ ಗೈರಾದವರ ಸಂಖ್ಯೆ 15,17,042. ಮೃತಪಟ್ಟ ಮತದಾರರ ಸಂಖ್ಯೆ 16,39,864 ಆಗಿದೆ. ಫಾರ್ಮ್ 6 ಬಳಸಿಕೊಂಡು ಮತದಾರರ ಪಟ್ಟಿಗೆ ಸೇರಬಹುದು ಎಂದು ಅನ್ಬುಕುಮಾರ್ ಹೇಳಿದರು.

 

Related posts

ಮಂಡ್ಯದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ವೃದ್ಧೆ ಸಾವು: ಮನೆಯಲ್ಲಿ ₹8 ಲಕ್ಷಕ್ಕೂ ಅಧಿಕ ಹಣ ಪತ್ತೆ

JanaNota Editor

ಖಾತೆ ಹಂಚಿಕೆ ಕಸರತ್ತು; ಯಾರಿಗೆ ಯಾವ ಖಾತೆ

JanaNota Editor

ದುಬೈ ರಿಟರ್ನ್ ಪ್ರಯಾಣಿಕನ ಬಾಯಿಯಲ್ಲಿ ಚಿನ್ನ : ಏರ್‌ಪೋರ್ಟ್‌ನಲ್ಲಿ ಬಂಧನ

JanaNota Editor