ಜನ ನೋಟ
ಶಿವಮೊಗ್ಗ

ಶಿಕಾರಿಪುರದ ಹರಿಗೆ ಗ್ರಾಮದಲ್ಲಿ ಭೀಗರ ಊಟಕ್ಕೆ ನಿಷೇಧ; ನಿಯಮ ಮೀರಿದ್ರೆ 1 ಲಕ್ಷ ದಂಡ

ಶಿವಮೊಗ್ಗ: ರಾಜ್ಯದಲ್ಲಿ ತೀವ್ರ ಬರಗಾಲದಿಂದ ರೈತರು, ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಶಿಕಾರಿಪುರ ತಾಲೂಕಿನ ಹರಿಗೆ ಗ್ರಾಮಸ್ಥರು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ಬಡವರು ಹಾಗೂ ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆ ಇಳಿಸಲು ಗ್ರಾಮಸ್ಥರು ಬೀಗರ ಊಟಕ್ಕೆ ನಿಷೇಧ ಹೇರಿದ್ದಾರೆ.

ಸಂಪ್ರದಾಯ ಬದಿಗಿರಿಸಿ, ಆರ್ಥಿಕ ಶಿಸ್ತಿಗೆ ಮಹತ್ವ ನೀಡಲಾಗಿದ್ದು, ಬೀಗರೂಟ ಹಾಕಿದರೆ 1 ಲಕ್ಷ ರೂ. ದಂಡ ಹಾಗೂ ಬೇರೆ ಗ್ರಾಮಕ್ಕೆ ಹೋಗಿ ಬೀಗರೂಟ ಮಾಡಿದರೆ 50 ಸಾವಿರ ರೂ. ದಂಡ ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಬಡ – ಮಧ್ಯಮ ಕುಟುಂಬಗಳು ಪ್ರತಿಷ್ಠೆಗಾಗಿ ಸಾಲ ಮಾಡಿ, ಬೀಗರೂಟ ಆಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದ ಹಿನ್ನೆಲೆ ಗ್ರಾಮಸ್ಥರು ಸಭೆ ನಡೆಸಿ ಈ ನಿರ್ಣಯ ಕೈಗೊಂಡಿದ್ದಾರೆ.

Related posts

ಎಸ್‌ಐಆರ್‌ ಪ್ರಕ್ರಿಯೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ: ಕೆ.ಎಸ್. ಈಶ್ವರಪ್ಪ

JanaNota Editor

ಪೌರ ಕಾರ್ಮಿಕರು ಆರೋಗ್ಯ ಸಂರಕ್ಷಕರು

JanaNota Editor

ಶಿವಮೊಗ್ಗ : ರೈಲು ನಿಲ್ದಾಣದ ಪ್ರೀ-ಪೇಯ್ಡ್ ಆಟೋಗಳಿಗೆ ಪೊಲೀಸರ ದಿಢೀರ್ ತಪಾಸಣೆ

JanaNota Editor