ಜನ ನೋಟ
Headlines

ಪವನ್‌ ಕಲ್ಯಾಣ್‌ ಹುಟ್ಟುಹಬ್ಬದ ಬ್ಯಾನರ್‌ ಕಟ್ಟಲು ಹೋದ ಅಭಿಮಾನಿಗೆ ವಿದ್ಯುತ್‌ ಶಾಕ್‌ : ಸ್ಥಳದಲ್ಲೇ ಸಾವು

ಹೈದರಾಬಾದ್: ನಟ ಹಾಗೂ ರಾಜಕಾರಣಿ ಪವನ್‌ ಕಲ್ಯಾಣ್‌ ಅವರ ಜನ್ಮದಿನಾಚರಣೆ ಸಂಭ್ರಮದ ನಡುವೆ ಆಂಧ್ರಪ್ರದೇಶದ ಅಮಲಾಪುರದಲ್ಲಿ ದುರಂತ ಸಂಭವಿಸಿದೆ. ಹುಟ್ಟುಹಬ್ಬದ ಬ್ಯಾನರ್‌ ಕಟ್ಟುವ ವೇಳೆ ವಿದ್ಯುತ್‌ ಪ್ರವಹಿಸಿ ಅಭಿಮಾನಿಯೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಬೆಂಡ ಮುರ್ಲಂಕ ನಿವಾಸಿ ರೋಲ್ಲಾ ಪ್ರೇಮ್‌ ಕುಮಾರ್ ಎಂದು ಗುರುತಿಸಲಾಗಿದೆ. ಅಮಲಾಪುರದ ಕಾಲೇಜೊಂದರ ಬಳಿ ಪವನ್‌ ಕಲ್ಯಾಣ್‌ ಅವರ ಹುಟ್ಟುಹಬ್ಬದ ಫ್ಲೆಕ್ಸ್‌ ಬ್ಯಾನರ್‌ ಅಳವಡಿಸುತ್ತಿದ್ದ ವೇಳೆ ಪ್ರೇಮ್‌ ಕುಮಾರ್‌ಗೆ ವಿದ್ಯುತ್‌ ಪ್ರವಹಿಸಿದೆ ಎಂದು ವರದಿಯಾಗಿದೆ.

ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್‌ ಕುಮಾರ್‌, ತಮ್ಮ ನೆಚ್ಚಿನ ನಟ ಹಾಗೂ ನಾಯಕನ ಜನ್ಮದಿನಾಚರಣೆಯಲ್ಲಿ ಭಾಗವಹಿಸಲು ಸ್ನೇಹಿತರೊಂದಿಗೆ ಸ್ವಗ್ರಾಮಕ್ಕೆ ಬಂದಿದ್ದರು ಎನ್ನಲಾಗಿದೆ. ಆದರೆ ಬ್ಯಾನರ್‌ ಅಳವಡಿಸುವ ವೇಳೆ ಸಂಭವಿಸಿದ ಆಕಸ್ಮಿಕ ಅವಘಡದಿಂದ ಅವರು ಪ್ರಾಣ ಕಳೆದುಕೊಂಡಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ತೀವ್ರ ದುಃಖ ಆವರಿಸಿದೆ.

Related posts

ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿಯ ಭೀಕರ ಹತ್ಯೆ : ಫ್ರಿಡ್ಜ್‌ನಲ್ಲಿ ಪತ್ತೆಯಾಯ್ತು ತಲೆ

JanaNota Editor

₹100ರ ಗಡಿಗೆ ಸಿಎನ್‌ಜಿ : ವಾಹನ ಸವಾರರು ಕಂಗಾಲು

JanaNota Editor

ಶಿವಮೊಗ್ಗ ದಸರಾ ಆನೆ ಘಟನೆ: ವೈಜ್ಞಾನಿಕ ವರದಿ ಬಳಿಕ ಮುಂದಿನ ಕ್ರಮ: ಸಚಿವ ಮಧು ಬಂಗಾರಪ್ಪ

JanaNota Editor