ಜನ ನೋಟ
ಶಿವಮೊಗ್ಗ

ಸಂವಿಧಾನದ ಆಶಯಗಳು ಮರೆಯಾಗುತ್ತಿರುವುದು ವಿಷಾದನೀಯ : ಮಧು ಬಂಗಾರಪ್ಪ

ಶಿವಮೊಗ್ಗ : ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವ ಹಾಗೂ ಅವಕಾಶ ಕಲ್ಪಿಸಿರುವ ಹಲವು ಅಂಶಗಳನ್ನು ನ್ಯಾಯಾಲಯಗಳು ಒಪ್ಪದಿರುವುದು ವಿಷಾದನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಸಂಜೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ‘ಮೆಮರೆಬಲ್ ಟ್ರಯಲ್ಸ್’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇಶ-ವಿದೇಶಗಳಲ್ಲಿ ನಡೆದ ಪ್ರಮುಖ 21 ನ್ಯಾಯಾಂಗ ಪ್ರಕರಣಗಳನ್ನು ವಿಶ್ಲೇಷಿಸಿರುವ ಈ ಕೃತಿ, ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡಿದವರ ಅನುಭವಗಳನ್ನು ಪರಿಚಯಿಸುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಅನ್ಯಾಯದ ತೀರ್ಪುಗಳಿಗೆ ಒಳಗಾಗಿ ಶಿಕ್ಷೆ ಅನುಭವಿಸಿದ ಹಾಗೂ ನೇಣಿಗೇರಿದ ಹೋರಾಟಗಾರರ ಕುರಿತು ಕೃತಿಯಲ್ಲಿ ವಿವರಿಸಲಾಗಿದೆ ಎಂದು ಸಚಿವರು ಹೇಳಿದರು.

ವಿದ್ಯಾರ್ಥಿಗಳು ನ್ಯಾಯಾಂಗ ವ್ಯವಸ್ಥೆ, ಸಂವಿಧಾನದ ಆಶಯಗಳು ಹಾಗೂ ಕಾಲಕ್ರಮೇಣ ಅವುಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಕೃತಿ ಸಹಕಾರಿಯಾಗಲಿದೆ. ಶಾಲಾ-ಕಾಲೇಜುಗಳ ಗ್ರಂಥಾಲಯಗಳಲ್ಲಿ ಕೃತಿ ಲಭ್ಯವಾಗುವಂತೆ ಮಾಡಲು ಗ್ರಂಥಾಲಯ ಇಲಾಖೆ ಮೂಲಕ ಖರೀದಿಸಲು ಶಿಫಾರಸು ಮಾಡುವುದಾಗಿ ತಿಳಿಸಿದರು.

ಹಿರಿಯ ನ್ಯಾಯವಾದಿ ಬಸಪ್ಪ ಗೌಡ ಮಾತನಾಡಿ, ಸತ್ಯವನ್ನು ಪ್ರತಿಪಾದಿಸಿದ ಸಾಕ್ರೆಟಿಸ್ ಕೂಡ ಜೈಲಿನಲ್ಲೇ ಸಾವಿಗೀಡಾದ ಉದಾಹರಣೆ ಇದೆ. ಸತ್ಯ, ದೇಶಪ್ರೇಮ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ತ್ಯಾಗವನ್ನು ಇಂದಿನ ಪೀಳಿಗೆ ಅರಿಯಬೇಕಿದೆ ಎಂದರು.

ಸಿಬಿಆರ್ ಕಾನೂನು ಕಾಲೇಜಿನ ಪ್ರಾಚಾರ್ಯೆ ಅನಲಾ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಪ್ರಾಧ್ಯಾಪಕ ರಾಜಶೇಖರ್ ಕಿಗ್ಗಾ ಮಾತನಾಡಿದರು.

ಪತ್ರಕರ್ತ ಹರ್ಷಕುಮಾರ್ ಕುಗ್ವೆ, ಪೀಪಲ್ ಲಾಯರ್ಸ್ ಗಿಲ್ಡ್ ಸಂಚಾಲಕ ನ್ಯಾಯವಾದಿ ಕೆ.ಪಿ. ಶ್ರೀಪಾಲ್, ಹಿರಿಯ ನ್ಯಾಯವಾದಿ ಜಿ.ಎಸ್. ನಾಗರಾಜ್ ಉಪಸ್ಥಿತರಿದ್ದರು. ನ್ಯಾಯವಾದಿ ಶಹರಾಜ್ ಸಿದ್ದಿಕಿ ಸ್ವಾಗತಿಸಿದರು.

Related posts

ಸ್ಟೋನ್ ಕ್ರಷರ್ ವಿವಾದದಲ್ಲಿ ಘರ್ಷಣೆ : ಬಿಜೆಪಿ ಮಾಜಿ ಶಾಸಕ ಅತರ್ ಸಿಂಗ್ ಭಡಾನಾ ಹತ್ಯೆ

JanaNota Editor

ಒತ್ತಡದ ಜೀವನಕ್ಕೆ ಆಯುರ್ವೇದವೇ ಉತ್ತಮ ಮದ್ದು: ಬಿ.ವೈ.ರಾಘವೇಂದ್ರ

JanaNota Editor

ಶಿವಮೊಗ್ಗದ ಇಎಸ್ಐ ಆಸ್ಪತ್ರೆಗಳಿಗೆ ಶಾಸಕ ಚನ್ನಬಸಪ್ಪ ದಿಢೀರ್ ಭೇಟಿ: ರೋಗಿಗಳನ್ನು ಹೊರಗಿನ ಮೆಡಿಕಲ್‌ಗೆ ಕಳುಹಿಸಿದರೆ ಕ್ರಮ

JanaNota Editor