ಜನ ನೋಟ
ಶಿವಮೊಗ್ಗ

ಅಪೋಲೋ ಆಸ್ಪತ್ರೆ ವತಿಯಿಂದ ರೋಬೋಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಆರೋಗ್ಯ ತಪಾಸಣಾ ಶಿಬಿರ

ಸೆ. 6ರಂದು ಶಿವಮೊಗ್ಗದಲ್ಲಿ ಡಾ. ರಾಜಶೇಖರ್ ಕೆ.ಟಿ. ಅವರಿಂದ ತಪಾಸಣೆ

ಶಿವಮೊಗ್ಗ: ಸೊಂಟ, ಮೊಣಕಾಲು ಹಾಗೂ ಕೀಲು ನೋವು, ನಡಿಗೆಯಲ್ಲಿ ತೊಂದರೆ ಸೇರಿದಂತೆ ವಿವಿಧ ಕೀಲು ಸಮಸ್ಯೆಗಳಿಂದ ಬಳಲುತ್ತಿರುವವರಿಗಾಗಿ ಅಪೋಲೋ ಆಸ್ಪತ್ರೆ ವತಿಯಿಂದ ರೋಬೋಟಿಕ್ ಜಾಯಿಂಟ್‌ ರಿಪ್ಲೇಸ್‌ಮೆಂಟ್‌ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಶಿಬಿರವು ಸೆಪ್ಟೆಂಬರ್ 6ರಂದು ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ, ಶಿವಮೊಗ್ಗದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿರುವ ರಾಜಕುಮಾರ್ ಡಯಾಗ್ನಾಸ್ಟಿಕ್ನಲ್ಲಿ ನಡೆಯಲಿದೆ.

ರೋಬೋಟಿಕ್ ಹಿಪ್ ಮತ್ತು ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಜಾಯಿಂಟ್‌ ರಿಪ್ಲೇಸ್‌ಮೆಂಟ್‌ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಮತ್ತು ರಾಜ್ಯದೆಲ್ಲೆಡೆ ಅನೇಕ ಪ್ರಶಸ್ತಿ, ಗೌರವಗಳಿಗೆ

ಪಾತ್ರರಾಗಿರುವ ಹಿರಿಯ ಅಸ್ಥಿ ಮತ್ತು ಕೀಲು ಬದಲಾವಣೆ ಶಸ್ತ್ರಚಿಕಿತ್ಸಾ ತಜ್ಞ ಡಾ. ರಾಜಶೇಖರ್ ಕೆ.ಟಿ. ಅವರು ಶಿಬಿರದಲ್ಲಿ ತಪಾಸಣೆ ನಡೆಸಿ, ರೋಗಿಗಳ ಸಮಸ್ಯೆಗೆ ಅನುಗುಣವಾಗಿ ಸೂಕ್ತ ಸಲಹೆ ಮತ್ತು ಚಿಕಿತ್ಸಾ ಮಾರ್ಗದರ್ಶನ ನೀಡಲಿದ್ದಾರೆ.

ಶಿಬಿರದಲ್ಲಿ ರೋಬೋಟಿಕ್ ಜಾಯಿಂಟ್‌ ರಿಪ್ಲೇಸ್‌ಮೆಂಟ್‌, ಮೊಣಕಾಲು ಹಾಗೂ ಸೊಂಟದ ಕೀಲು ಸಮಸ್ಯೆಗಳು ಸೇರಿದಂತೆ ವಿವಿಧ ಕೀಲು ನೋವುಗಳಿಗೆ ತಜ್ಞರಿಂದ ಸಲಹೆ ಪಡೆಯಲು ಅವಕಾಶವಿದೆ.

ಮೊಣಕಾಲು, ಸೊಂಟ ಅಥವಾ ಇತರೆ ಕೀಲು ನೋವಿನಿಂದ ಬಳಲುತ್ತಿರುವವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ: ದೀಪಕ್: 6363238510

08182-404808 ಗೆ ಸಂಪರ್ಕಿಸಬಹುದು.

Related posts

ಶಿವಮೊಗ್ಗದಲ್ಲಿ ಆ.21ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ

JanaNota Editor

ದಿನ ಭವಿಷ್ಯ 14-08-2026

JanaNota Editor

ಗುಣಮಟ್ಟದ ಸಂಶೋಧನೆ, ನವೀನ ಚಿಂತನೆ ಶೈಕ್ಷಣಿಕ ಸಂಸ್ಥೆಯ ಶ್ರೇಷ್ಠತೆಗೆ ಪ್ರಮುಖ ಆಧಾರ: ಡಾ. ಸ್ವಾಮಿ

JanaNota Editor