ಜನ ನೋಟ
ಶಿವಮೊಗ್ಗ

ಸಾಗರ : ಆಯುಧ ಪೂಜೆ ದಿನದಂದು ಹೊಸ ಕಾರು ಖರೀದಿ ಸಂಭ್ರಮ ಕ್ಷಣದಲ್ಲಿ ಮಾಯ; ಶೋರೂಮ್‌ನಿಂದ ನೇರವಾಗಿ ರಸ್ತೆಗೆ ನುಗ್ಗಿದ ಕಾರು, ಇಬ್ಬರಿಗೆ ಗಾಯ

ಸಾಗರ : ಆಯುಧ ಪೂಜೆ ದಿನದಂದು ಹೊಸ ಕಾರು ಖರೀದಿಸಿದ್ದ ವ್ಯಕ್ತಿಯೊಬ್ಬರ ಸಂಭ್ರಮ ಕ್ಷಣದಲ್ಲಿ ಮಾಯವಾದ ಘಟನೆ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

ಶೋರೂಮ್‌ನಿಂದ ಕಾರು ಡೆಲಿವರಿ ಪಡೆಯುವ ಸಂದರ್ಭದಲ್ಲಿ ಅಪಘಾತ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ನೇರವಾಗಿ ರಸ್ತೆಗೆ ನುಗ್ಗಿದ್ದರಿಂದ ಇಬ್ಬರು ಬೈಕ್‌ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾಗರದ ಮಾರುತಿ ಕಾರು ಶೋರೂಮ್‌ ಬಳಿ ಈ ಘಟನೆ ನಡೆದಿದೆ. ಶೋರೂಮ್‌ನಲ್ಲಿ ಹೊಸ ಕಾರನ್ನು ಪಡೆದು, ಹೊರಬರುವ ವೇಳೆ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಶೋರೂಮ್ ಎದುರಿನ ಬ್ಯಾರಿಕೇಡ್‌ಗೆ ಡಿಕ್ಕಿಯಾಗಿ, ಬಳಿಕ ರಸ್ತೆಗೆ ನುಗ್ಗಿದೆ. ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಪಘಾತದ ದೃಶ್ಯ ಶೋರೂಮ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಆ.23ರಂದು ಅಖಿಲ ಕರ್ನಾಟಕ ಮೂರನೇ ಗಜಲ್ ಸಮ್ಮೇಳನ

JanaNota Editor

ಶಿಕಾರಿಪುರದಲ್ಲಿ ಸೆ.30ರಂದು ‘ಭಾರತ್ ಜೋಡೋ 2.0’ ಪಾದಯಾತ್ರೆ : ಮಧು ಬಂಗಾರಪ್ಪ

JanaNota Editor

ಜಾತಿ ಹೆಸರಿನಲ್ಲಿ ನಿಂದನೆ – ಸುಂದರೇಶ್ ಸಮಾಜದ ಕ್ಷಮೆ ಕೇಳಬೇಕು : ಆರ್. ಪ್ರಸನ್ನ ಕುಮಾರ್

JanaNota Editor