ಜನ ನೋಟ
ಶಿವಮೊಗ್ಗ

ಮಂಡಿನೋವು ತಪಾಸಣಾ ಶಿಬಿರ ಸೆ.15ರಿಂದ 19ರವರೆಗೆ ವಿಸ್ತರಣೆ

ಶಿವಮೊಗ್ಗ: ವಯೋಸಹಜ ಮಂಡಿನೋವು ಹಾಗೂ ಕೀಲುನೋವಿನಿಂದ ಬಳಲುತ್ತಿರುವವರಿಗೆ ನೆರವಾಗುವ ಉದ್ದೇಶದಿಂದ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಮಂಡಿನೋವು ತಪಾಸಣಾ ಶಿಬಿರವನ್ನು ಸಾರ್ವಜನಿಕರ ಬೇಡಿಕೆ ಮೇರೆಗೆ ಸೆ.15ರಿಂದ 19ರವರೆಗೆ ವಿಸ್ತರಿಸಲಾಗಿದೆ.

ಈ ಮೊದಲು ಸೆ.1ರಿಂದ 7ರವರೆಗೆ ಶಿಬಿರ ಆಯೋಜಿಸಲಾಗಿತ್ತು. ಇದೀಗ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಶಿಬಿರ ನಡೆಯಲಿದೆ. ಶಿವಮೊಗ್ಗ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲದೆ ಬೆಂಗಳೂರು, ಮೈಸೂರು, ಕೊಡಗು ಹಾಗೂ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದಲೂ ಸಾರ್ವಜನಿಕರು ಶಿಬಿರದ ಸೌಲಭ್ಯ ಪಡೆಯಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ.

ಬಿದ್ದು ಗಾಯಗೊಂಡು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯದೆ ನಾಟಿ ಚಿಕಿತ್ಸೆ ಮಾಡಿಸಿಕೊಂಡು ಕಾಲು ಡೊಂಕಾಗಿರುವವರು, ಸುದೀರ್ಘ ಕಾಲದಿಂದ ಮಂಡಿನೋವಿನಿಂದ ಬಳಲುತ್ತಿರುವವರು, ಎರಡೂ ಮಂಡಿಗಳು ಡೊಂಕಾಗಿ ಕುಳಿತರೆ ಏಳಲು ಹಾಗೂ ಮೆಟ್ಟಿಲು ಹತ್ತಲು ಸಾಧ್ಯವಾಗದವರು, ಕ್ಯಾಲ್ಸಿಯಂ ಕೊರತೆಯಿಂದ ಮೂಳೆ ಸವೆತ ಮತ್ತು ಕೀಲುನೋವು ಎದುರಿಸುತ್ತಿರುವವರು ಶಿಬಿರದ ಸೌಲಭ್ಯ ಪಡೆಯಬಹುದಾಗಿದೆ.

ಅನುಭವಿ ಮೂಳೆ ಶಸ್ತ್ರಚಿಕಿತ್ಸಕರು ರೋಗಿಗಳನ್ನು ತಪಾಸಣೆ ನಡೆಸಿ, ಸೂಕ್ತ ಸಲಹೆ ಹಾಗೂ ಚಿಕಿತ್ಸೆಯ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ಅಗತ್ಯ ರಕ್ತ ಪರೀಕ್ಷೆ ಹಾಗೂ ರೋಗ ನಿರ್ಣಯ ಪರೀಕ್ಷೆಗಳ ಮೇಲೆ ಶೇ.20ರಷ್ಟು ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.

ಮೂಳೆ ತಜ್ಞರ ಜೊತೆಗೆ ನುರಿತ ಫಿಸಿಯೋಥೆರಪಿಸ್ಟ್‌ಗಳು, ಆಹಾರ ತಜ್ಞರು ಹಾಗೂ ಸೈಕಾಲಜಿಸ್ಟ್‌ಗಳು ಶಿಬಿರದಲ್ಲಿ ಲಭ್ಯವಿರಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 08182-2673009 ಸಂಪರ್ಕಿಸಬಹುದು.

Related posts

ಮೋದಿ ಹುಟ್ಟುಹಬ್ಬ ‘ನಿರುದ್ಯೋಗಿಗಳ ದಿನ’ವನ್ನಾಗಿ ಆಚರಿಸಿದ ಯುವ ಕಾಂಗ್ರೆಸ್

JanaNota Editor

ಸೆ.6ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

JanaNota Editor

ಸೆ.30 ರಂದು ಶಿವಮೊಗ್ಗದ ವಿವಿಧೆಡೆ ವಿದ್ಯುತ್ ವ್ಯತ್ಯಯ

JanaNota Editor