ಜನ ನೋಟ
ಶಿವಮೊಗ್ಗ

ಸೆ. 17 ರಂದು ಮಹಿಳಾ ದಸರಾ ಪೂರ್ವಭಾವಿ ಸಭೆ

ಮಹಿಳೆಯರು ಭಾಗವಹಿಸಲು ಮನವಿ

ಶಿವಮೊಗ್ಗ,
ಸೆ,15(ಕರ್ನಾಟಕ ವಾರ್ತೆ): ಶಿವಮೊಗ್ಗ ಮಹಾನಗರ ಪಾಲಿಕೆ ಮಹಿಳಾ ದಸರಾ ಸಮಿತಿಯ ವತಿಯಿಂದ ಆಯೋಜಿಸಲಾಗುವ ‘ಮಹಿಳಾ ದಸರಾ 2026’ ಕಾರ್ಯಕ್ರಮಗಳ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಚರ್ಚಿಸಲು ಸೆಪ್ಟೆಂಬರ್ 17 ರಂದು ಬೆಳಿಗ್ಗೆ 10 ಗಂಟೆಗೆ ಮಹಾನಗರಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಈ ಸಭೆಯಲ್ಲಿ ವಿವಿಧ ಮಹಿಳಾ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಗುತ್ತದೆ. ಆದ್ದರಿಂದ ನಗರದ ಎಲ್ಲಾ ಮಹಿಳಾ ಸಂಘ ಸಂಸ್ಥೆಗಳು, ಪ್ರತಿನಿಧಿಗಳು ಹಾಗೂ ಸಾರ್ವಜನಿಕ ಮಹಿಳೆಯರು ತಪ್ಪದೇ ಭಾಗವಹಿಸಬೇಕಾಗಿ ಸಮುದಾಯ ವ್ಯವಹಾರಿಕ ಅಧಿಕಾರಿ ಹಾಗೂ ಮಹಿಳಾ ದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Related posts

ಪಾಟ್ನಾ ಮೃಗಾಲಯದಿಂದ ತ್ಯಾವರೆಕೊಪ್ಪಕ್ಕೆ ಬರಲಿವೆ 8 ತೋಳ, 4 ಘರಿಯಾಲ್

JanaNota Editor

ಹೊಳೇಹೊನ್ನೂರು : ಅಕ್ರಮ ವಿದ್ಯುತ್ ಬೇಲಿಗೆ ಕರಡಿ ಬಲಿ : ಸಾಕ್ಷ್ಯ ಮರೆಮಾಚಲು ಕಾಲುವೆಯಲ್ಲಿ ಮೃತದೇಹ ಹೂತು ಹಾಕಿದ ಆರೋಪ

JanaNota Editor

ಆ.25ರಂದು ಬೃಹತ್ ವಿಧಾನಸೌಧ ಚಲೋ: ರೈತ ಸಂಘ

JanaNota Editor