ಜನ ನೋಟ
ರಾಜ್ಯ

ಎಲ್ಲಾ ಶಾಲೆಗಳಲ್ಲೂ ನ.1ರಂದೇ ಕನ್ನಡ ರಾಜ್ಯೋತ್ಸವ ಕಡ್ಡಾಯ: ರಜೆ ಇದ್ರೂ ಆಚರಣೆ ತಪ್ಪಿಸುವಂತಿಲ್ಲ

ಬೆಂಗಳೂರು : ನವೆಂಬರ್ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲೇಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ರಜೆ ನೆಪದಲ್ಲಿ ಆಚರಣೆ ತಪ್ಪಿಸುವಂತಿಲ್ಲ. ವಾರದ ರಜೆಯ ಕಾರಣಕ್ಕೆ ಆಚರಣೆಯಿಂದ ವಿನಾಯಿತಿ ಪಡೆಯಲು ಅವಕಾಶವಿಲ್ಲ ಎಂದು ಖಡಕ್ ಸೂಚನೆ ನೀಡಿದೆ.

ಅಲ್ಲದೇ ಕನ್ನಡದ ಹಬ್ಬ ಆಚರಣೆಯಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಈ ಬಾರಿ ರಾಜ್ಯೋತ್ಸವ ಭಾನುವಾರ ಬಂದಿರುವುದರಿಂದ ಶಾಲೆಗಳಿಗೆ ಪ್ರತ್ಯೇಕ ವಿನಾಯಿತಿ ನೀಡಲಾಗಿಲ್ಲ. ಹೀಗಾಗಿ ನವೆಂಬರ್ 1ರಂದೇ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುತ್ತದೆ.

ಕನ್ನಡ ರಾಜ್ಯೋತ್ಸವವು ಕೇವಲ ಆಚರಣೆಯ ದಿನವಲ್ಲ, ಕನ್ನಡ ಭಾಷೆ, ನೆಲ ಮತ್ತು ಸಂಸ್ಕೃತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಂದರ್ಭವೂ ಹೌದು. ಈ ಹಿನ್ನೆಲೆಯಲ್ಲಿ ರಜಾದಿನವಾಗಿದ್ದರೂ ರಾಜ್ಯೋತ್ಸವ ಆಚರಣೆಯನ್ನು ತಪ್ಪಿಸಬಾರದು ಎಂಬ ನಿಲುವನ್ನು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

Related posts

ಜಡ್ಜ್ ಮುಂದೆ ಭಯದಿಂದ ಸಾಕ್ಷಿ ಹೇಳಲು ತಡವರಿಸಿದ ಚಿಕ್ಕಣ್ಣ : 10 ನಿಮಿಷ ರಿಲ್ಯಾಕ್ಸ್ ಆಗಿ ಎಂದ ಕೋರ್ಟ್

JanaNota Editor

‘ವ್ಯವಸ್ಥಿತ ಸಂಚು ರೂಪಿಸಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ’ : ಮಾಜಿ ಸಿಎಂ ಯಡಿಯೂರಪ್ಪ

JanaNota Editor

ಶಾಲೆಯಲ್ಲಿ ಬಿಸಿಯೂಟ ಸೇವಿಸುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

JanaNota Editor