ಜನ ನೋಟ
Headlines

ಅಗ್ನಿಶಾಮಕ ವಾಹನದಿಂದ ಶಾಸಕರ ಇನ್ನೋವಾ ಕಾರಿಗೆ ಸ್ನಾನ! ವೈರಲ್ ವಿಡಿಯೋ

ಸಿಂಗ್ರೌಲಿ (ಮಧ್ಯಪ್ರದೇಶ): ತುರ್ತು ಪರಿಸ್ಥಿತಿಯಲ್ಲಿ ಜನರ ರಕ್ಷಣೆಗೆ ಧಾವಿಸಬೇಕಾದ ಅಗ್ನಿಶಾಮಕ ವಾಹನವನ್ನು ಬಿಜೆಪಿ ಶಾಸಕರ ಖಾಸಗಿ ಕಾರು ತೊಳೆಯಲು ಬಳಸಿರುವ ಆರೋಪ ಇದೀಗ ಮಧ್ಯಪ್ರದೇಶದಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ.

ಸಿಂಗ್ರೌಲಿ ಕ್ಷೇತ್ರದ ಬಿಜೆಪಿ ಶಾಸಕ ರಾಮ್‌ನಿವಾಸ್ ಶಾ ಅವರ ಅಧಿಕೃತ ನಿವಾಸದ ಮುಂದೆ ಮಹಾನಗರ ಪಾಲಿಕೆಯ ಅಗ್ನಿಶಾಮಕ ವಾಹನದ ಪೈಪ್ ಬಳಸಿ ಅವರ ಟೊಯೋಟಾ ಇನ್ನೋವಾ ಕಾರನ್ನು ತೊಳೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮೂವರು ಸಿಬ್ಬಂದಿಗಳು ಕಾರಿನ ಮೇಲೆ ನೀರು ಸುರಿದು ಸ್ವಚ್ಛಗೊಳಿಸುತ್ತಿರುವುದು ಕಾಣಿಸಿದೆ.

ಈ ಘಟನೆಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಜನರ ಮನೆಗಳಿಗೆ ಬೆಂಕಿ ಬಿದ್ದಾಗ ಸಮಯಕ್ಕೆ ತಲುಪಬೇಕಾದ ಅಗ್ನಿಶಾಮಕ ವಾಹನವನ್ನು ಶಾಸಕರ ವೈಯಕ್ತಿಕ ಕೆಲಸಕ್ಕೆ ಬಳಸಿರುವುದು ಸರಕಾರಿ ಯಂತ್ರಾಂಗದ ಬಹಿರಂಗ ದುರ್ಬಳಕೆ ಎಂದು ಟೀಕಿಸಲಾಗಿದೆ.

ವಿಪಕ್ಷ ನಾಯಕ ಉಮಂಗ್ ಸಿಂಗಾರ್, ಸಾಮಾನ್ಯ ಜನರ ತುರ್ತು ಸೇವೆಗೆ ಮೀಸಲಾದ ವಾಹನವನ್ನು ಬಿಜೆಪಿ ಶಾಸಕರು ತಮ್ಮ ಖಾಸಗಿ ವಾಷಿಂಗ್ ಸೆಂಟರ್‌ನಂತೆ ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಆದರೆ ಆರೋಪವನ್ನು ನೇರವಾಗಿ ಒಪ್ಪಿಕೊಳ್ಳದ ಶಾಸಕ ರಾಮ್‌ನಿವಾಸ್ ಶಾ, ಘಟನೆ ನಡೆದ ವೇಳೆ ತಾವು ಸ್ಥಳದಲ್ಲಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಕಾರನ್ನು ಬೇಗ ತರಲು ಚಾಲಕನಿಗೆ ಹೇಳಿದ್ದೆ, ನಂತರ ಅಲ್ಲಿ ಏನಾಯಿತು ಎಂಬುದು ತನಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ತುರ್ತು ಸೇವೆಗೆ ಮೀಸಲಾದ ಸರಕಾರಿ ವಾಹನದ ಬಳಕೆ ಇದೀಗ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಮುಜುಗರ ತಂದಿದೆ.

Related posts

ಪತ್ನಿಯನ್ನು ಬೈದಿದ್ದಕ್ಕೆ ಅಳಿಯನ ಕೊಲೆ? ಮನೆಯೊಳಗಿನ ಜಗಳ ದುರಂತ ಅಂತ್ಯ

JanaNota Editor

ಹೊರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ಕ್ಷಿಪಣಿ ದಾಳಿ; 11 ಭಾರತೀಯ ಸಿಬ್ಬಂದಿಗೆ ಗಾಯ

JanaNota Editor

ಪವನ್‌ ಕಲ್ಯಾಣ್‌ ಹುಟ್ಟುಹಬ್ಬದ ಬ್ಯಾನರ್‌ ಕಟ್ಟಲು ಹೋದ ಅಭಿಮಾನಿಗೆ ವಿದ್ಯುತ್‌ ಶಾಕ್‌ : ಸ್ಥಳದಲ್ಲೇ ಸಾವು

JanaNota Editor