ಶಿವಮೊಗ್ಗ: ಶ್ರಾವಣ ಮಾಸದ ಎರಡನೇ ಶುಕ್ರವಾರದ ಅಂಗವಾಗಿ ಆಚರಿಸಲಾಗುತ್ತಿರುವ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಅಮ್ಮನವರಿಗೆ ವಿಶೇಷವಾಗಿ ‘ಗಜಲಕ್ಷ್ಮಿ ದೇವಿ’ ಅಲಂಕಾರ ಮಾಡಲಾಯಿತು.
ಅಮ್ಮನವರ ಮೂರ್ತಿಯನ್ನು ವಿವಿಧ ಬಗೆಯ ಹೂವುಗಳು, ಆಭರಣಗಳು ಹಾಗೂ ಅಲಂಕಾರಿಕ ವಸ್ತುಗಳಿಂದ ಸುಂದರವಾಗಿ ಸಿಂಗರಿಸಲಾಗಿತ್ತು. ಎರಡೂ ಬದಿಗಳಲ್ಲಿ ಆನೆಗಳೊಂದಿಗೆ ಗಜಲಕ್ಷ್ಮಿ ದೇವಿಯ ರೂಪದಲ್ಲಿ ಅಮ್ಮನವರನ್ನು ಅಲಂಕರಿಸಲಾಗಿದ್ದು, ವಿಶೇಷ ಅಲಂಕಾರ ಭಕ್ತರ ಗಮನ ಸೆಳೆಯಿತು.
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಅಮ್ಮನವರ ವಿಶೇಷ ಅಲಂಕಾರದ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಕೋಟೆ ಶ್ರೀ ಮಾರಿಕಾಂಬ ಅಮ್ಮನವರ ಗಜಲಕ್ಷ್ಮಿ ದೇವಿ ಅಲಂಕಾರದ ದೃಶ್ಯ ಭಕ್ತರ ಕಣ್ಮನ ಸೆಳೆಯಿತು.
