ಶಿಕಾರಿಪುರ: ತಾಲೂಕಿನ ಕಿಟ್ಟದಹಳ್ಳಿ ಗ್ರಾಮದಿಂದ ಬುಧವಾರ ಬೆಳಗ್ಗೆ(ಸೆ30) ಕಾಂಗ್ರೆಸ್ ಭಾರತ್ ಜೋಡೋ 2.0 ಪಾದಯಾತ್ರೆ ಆರಂಭವಾಗಿದೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭಾರತ್ ಜೋಡೋ 2.0 ಪಾದಯಾತ್ರೆಗೆ ಚಾಲನೆ ನೀಡಿದರು. ನಗರಾಭಿವೃದ್ಧಿ ಸಚಿವರಾದ ಯತಿಂದ ಸಿದ್ದರಾಮಯ್ಯ, ಮುಜರಾಯಿ ಸಚಿವ ಬಸಂತಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಉಪಾಧ್ಯಕ್ಷ ನಾರಾಯಣ ಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಅಭಯಚಂದ್ರ ಜೈನ್, ಶಾಸಕರಾದ ಯು.ಬಿ. ಬಣಕಾರ್, ಶಿವಗಂಗಾ ಬಸವರಾಜ್, ಮಾಜಿ ಸಂಸದ ಚಂದ್ರಪ್ಪ, ಜಿಲ್ಲೆ ಹಾಗೂ ತಾಲೂಕಿನ ಮುಖಂಡರು ಮತ್ತಿತರು ಮುಖಂಡರು ಉಪಸ್ಥಿತರಿದ್ದರು.
ಭಾರತ್ ಜೋಡ್ ಹಾಡಿನೊಂದಿಗೆ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಹೆಜ್ಜೆ ಹಾಕಿದರು. ಪಾದಯಾತ್ರೆ ಸಾಗುವ ಹಾದಿಯಲ್ಲಿ ಕಾಂಗ್ರೆಸ್ ಧ್ವಜಗಳು ಹಾಗೂ ಮುಖಂಡರ ಭಾವಚಿತ್ರಗಳಿದ್ದ ಪ್ಲೆಕ್ಸ್ ಗಳು ರಾರಾಜಿಸಿದವು.
ಭಾರತ್ ಜೋಡೋ 2 ಪಾದಯಾತ್ರೆಗೂ ಮುನ್ನ ತಾಲೂಕಿನ ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಸಚಿವರು ಪುಷ್ಪ ನಮನ ಸಲ್ಲಿಸಿದರು.
ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರು 12 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಐತಿಹಾಸಿಕ ‘ಭಾರತ್ ಜೋಡೊ’ ಪಾದಯಾತ್ರೆ ಕರ್ನಾಟಕ ಪ್ರವೇಶಿಸಿ ಸೆ.30ರಂದು ನಾಲ್ಕು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಿಂದ ರಾಜ್ಯ ಮಟ್ಟದ ಭಾರತ್ ಜೋಡೋ ಯಾತ್ರೆ -2.0 ಹಮ್ಮಿಕೊಂಡಿದೆ.
