ಜನ ನೋಟ
ಶಿವಮೊಗ್ಗ

ಹೊಸನಗರದ ಶಿಕ್ಷಕಿ ಪ್ರಮೀಳಾಗೆ ಅಭಿನಂದನೆ

ವರದಿ: ಸನತ್ ಶಿವಮೊಗ್ಗ 

 

ಹೊಸನಗರ: ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಪ್ರಮೀಳಾ ಎ.ಎ. ಅವರನ್ನು ಶಾಲೆಯ ವತಿಯಿಂದ ಇಂದು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಶಾಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಸುಮತಿ ಹಾಗೂ ಸಹ ಶಿಕ್ಷಕರಾದ ಜ್ಯೋತಿ, ಪರಿಧಾ, ಮೀನಾಕ್ಷಿ ಆಶಿಕ್ ಮತ್ತು ಮಂಜುನಾಥ್ ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತ ಶಿಕ್ಷಕಿಗೆ ಅಭಿನಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ಹಿರಿಮನೆ, ಸದಸ್ಯರಾದ ದೇವಪ್ಪ ದೊಡ್ಡಿನ ಮನೆ ಹಾಗೂ ಸಂತೋಷ ಚಿಕ್ಕಪೇಟೆ, ಅಡುಗೆ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ದೊರೆತ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಶಾಲಾ ಕುಟುಂಬದ ವತಿಯಿಂದ ಹರ್ಷ ವ್ಯಕ್ತಪಡಿಸಲಾಯಿತು.

Related posts

ಕೋಟೆ ಶ್ರೀ ಮಾರಿಕಾಂಬ ಅಮ್ಮನವರಿಗೆ ಗಜಲಕ್ಷ್ಮಿ ದೇವಿ ಅಲಂಕಾರ

JanaNota Editor

‘ವಂದೇ ಮಾತರಂ’ ಕುರಿತು ಚರ್ಚೆಯೇ ಅನಗತ್ಯ: ಈಶ್ವರಪ್ಪ

JanaNota Editor

ಶಿಕಾರಿಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

JanaNota Editor