ಜನ ನೋಟ
ಶಿವಮೊಗ್ಗ

ಸೊರಬ: ಎಂಟು ಕಾಲು, ಮೂರು ಕಿವಿ, ಎರಡು ಬಾಲ, ಎರಡು ನಾಲಿಗೆಗಳಿದ್ದ ಕುರಿಮರಿ ಜನನ : ಕೆಲವೇ ಗಂಟೆಗಳಲ್ಲಿ ಸಾವು

ಸೊರಬ : ತಾಲೂಕಿನ ಉದ್ರಿ ಗ್ರಾಮ ಸಮೀಪದ ಉದ್ರಿ ವಡ್ಡಿಗೆರೆ ಗ್ರಾಮದಲ್ಲಿ ಅಪರೂಪದ ದೈಹಿಕ ವೈಶಿಷ್ಟ್ಯಗಳನ್ನು ಹೊಂದಿದ ಕುರಿಮರಿಯೊಂದು ಬುಧವಾರ ಜನಿಸಿ, ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಉದ್ರಿ ವಡ್ಡಿಗೆರೆ ಗ್ರಾಮದ ಕಾಳಿಂಗಪ್ಪ ಭಾವಿಕಟೇರ್ ಹಾಗೂ ಪುಟ್ಟಮ್ಮ ದಂಪತಿ ಕೃಷಿಯೊಂದಿಗೆ ಕುರಿ ಸಾಕಾಣಿಕೆ ನಡೆಸುತ್ತಿದ್ದು, ಅವರ ಕುರಿಯೊಂದು ಹೆರಿಗೆ ವೇಳೆ ವಿಚಿತ್ರ ದೈಹಿಕ ರಚನೆಯ ಮರಿಗೆ ಜನ್ಮ ನೀಡಿತು. ಜನಿಸಿದ ಮರಿಗೆ ಎಂಟು ಕಾಲುಗಳು, ಮೂರು ಕಿವಿಗಳು, ಎರಡು ಬಾಲಗಳು ಹಾಗೂ ಎರಡು ನಾಲಿಗೆಗಳಿದ್ದವು. ಆರಂಭದಲ್ಲಿ ಅವಳಿ ಮರಿಗಳು ಜನಿಸಬಹುದೆಂದು ಕುಟುಂಬಸ್ಥರು ಭಾವಿಸಿದ್ದರೂ, ಒಂದೇ ದೇಹದಲ್ಲಿ ಈ ರೀತಿಯ ಅಪರೂಪದ ವೈಶಿಷ್ಟ್ಯಗಳಿರುವ ಮರಿ ಜನಿಸಿರುವುದು ಕಂಡುಬಂದಿತು.

ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಚಿತ್ರ ಕುರಿಮರಿಯನ್ನು ವೀಕ್ಷಿಸಿದರು. ಹಲವರು ಅದರ ಚಿತ್ರ ಹಾಗೂ ವಿಡಿಯೊಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಪಶುವೈದ್ಯರ ಪ್ರಕಾರ, ಇಂತಹ ಅಪರೂಪದ ಜನನಗಳು ಭ್ರೂಣದ ಬೆಳವಣಿಗೆಯ ಹಂತದಲ್ಲಿ ಉಂಟಾಗುವ ಜನ್ಮಜಾತ ದೈಹಿಕ ವೈಪರೀತ್ಯಗಳಿಂದ ಸಂಭವಿಸಬಹುದು. ಇಂತಹ ಮರಿಗಳು ಸಾಮಾನ್ಯವಾಗಿ ಹೆಚ್ಚು ಕಾಲ ಬದುಕುವುದು ವಿರಳವಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಪರೂಪದ ಈ ಘಟನೆ ಉದ್ರಿ ವಡ್ಡಿಗೆರೆ ಗ್ರಾಮದಲ್ಲಿ ದಿನವಿಡೀ ಚರ್ಚೆಗೆ ಗ್ರಾಸವಾಗಿದ್ದು, ಪ್ರಕೃತಿಯ ವಿಚಿತ್ರ ಸೃಷ್ಟಿಯೊಂದಾಗಿ ಜನರ ಗಮನ ಸೆಳೆಯಿತು.

Related posts

ಕಸ್ತೂರಿ ರಂಗನ್ ವರದಿ ಕುರಿತು ಸೆ.21ರಂದು ವಿಶೇಷ ಅಧಿವೇಶನ

JanaNota Editor

ಸಿ.ಎಸ್. ಷಡಾಕ್ಷರಿ ಭಾಷಣಕ್ಕೆ ಮಂತ್ರಮುಗ್ಧರಾದ ಜನತೆ : ಸ್ವದೇಶಿ ಮಂತ್ರಕ್ಕೆ ಸಾಕ್ಷಿಯಾದ ಶಿವಮೊಗ್ಗ

JanaNota Editor

ಸಕ್ರೆಬೈಲ್‌ನಲ್ಲಿ ಶಾಲಾ ಬಸ್ ಅಪಘಾತ : ಮರಕ್ಕೆ ಡಿಕ್ಕಿ, ಚಾಲಕ–ಮಕ್ಕಳಿಗೆ ಸಣ್ಣಪುಟ್ಟ ಗಾಯ

JanaNota Editor