ಜನ ನೋಟ
ರಾಜ್ಯ

ಎಲ್ಲಾ ಶಾಲೆಗಳಲ್ಲೂ ನ.1ರಂದೇ ಕನ್ನಡ ರಾಜ್ಯೋತ್ಸವ ಕಡ್ಡಾಯ: ರಜೆ ಇದ್ರೂ ಆಚರಣೆ ತಪ್ಪಿಸುವಂತಿಲ್ಲ

ಬೆಂಗಳೂರು : ನವೆಂಬರ್ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲೇಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ರಜೆ ನೆಪದಲ್ಲಿ ಆಚರಣೆ ತಪ್ಪಿಸುವಂತಿಲ್ಲ. ವಾರದ ರಜೆಯ ಕಾರಣಕ್ಕೆ ಆಚರಣೆಯಿಂದ ವಿನಾಯಿತಿ ಪಡೆಯಲು ಅವಕಾಶವಿಲ್ಲ ಎಂದು ಖಡಕ್ ಸೂಚನೆ ನೀಡಿದೆ.

ಅಲ್ಲದೇ ಕನ್ನಡದ ಹಬ್ಬ ಆಚರಣೆಯಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಈ ಬಾರಿ ರಾಜ್ಯೋತ್ಸವ ಭಾನುವಾರ ಬಂದಿರುವುದರಿಂದ ಶಾಲೆಗಳಿಗೆ ಪ್ರತ್ಯೇಕ ವಿನಾಯಿತಿ ನೀಡಲಾಗಿಲ್ಲ. ಹೀಗಾಗಿ ನವೆಂಬರ್ 1ರಂದೇ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುತ್ತದೆ.

ಕನ್ನಡ ರಾಜ್ಯೋತ್ಸವವು ಕೇವಲ ಆಚರಣೆಯ ದಿನವಲ್ಲ, ಕನ್ನಡ ಭಾಷೆ, ನೆಲ ಮತ್ತು ಸಂಸ್ಕೃತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಂದರ್ಭವೂ ಹೌದು. ಈ ಹಿನ್ನೆಲೆಯಲ್ಲಿ ರಜಾದಿನವಾಗಿದ್ದರೂ ರಾಜ್ಯೋತ್ಸವ ಆಚರಣೆಯನ್ನು ತಪ್ಪಿಸಬಾರದು ಎಂಬ ನಿಲುವನ್ನು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

Related posts

ಮಾಫಿ ಸಾಕ್ಷಿಗೆ ದಿನಾಂಕ ನಿಗದಿ, ಸೆ.28ಕ್ಕೆ ದರ್ಶನ್ ಭವಿಷ್ಯ ಭಾಗಷಃ ನಿರ್ಧಾರ

JanaNota Editor

ಸದನದ ಕಲಾಪಕ್ಕೆ ಬಿಜೆಪಿ ನಿರಂತರ ಅಡ್ಡಿ: ಮಧು ಬಂಗಾರಪ್ಪ ಆಕ್ರೋಶ

JanaNota Editor

ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ: ಇಬ್ಬರು ಮಕ್ಕಳ ಸಹಿತ ದಂಪತಿ ನಾಪತ್ತೆ

JanaNota Editor