ಜನ ನೋಟ
Headlines

ಆಗುಂಬೆ ಘಾಟಿಯಲ್ಲಿ ತಿರುವು ಪಡೆಯಲಾಗದೆ ಸಿಲುಕಿದ ಕೆಎಸ್‌ಆರ್‌ಟಿಸಿ ಬಸ್

ಹೆಬ್ರಿ: ಉಡುಪಿ ಕಡೆಯಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೊಂದು ಆಗುಂಬೆ ಘಾಟಿಯಲ್ಲಿ ತಿರುವು ಪಡೆಯಲಾಗದೆ ಕೆಲಕಾಲ ಸಿಲುಕಿಕೊಂಡ ಘಟನೆ ರವಿವಾರ ನಡೆದಿದೆ.

ಬಸ್ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಬಳಿಕ ಬಸ್ಸನ್ನು ಹಿಮ್ಮುಖವಾಗಿ ಚಲಾಯಿಸಿ ಸ್ವಲ್ಪ ದೂರಕ್ಕೆ ಕೊಂಡೊಯ್ದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ರವಿವಾರ ರಜಾದಿನವಾಗಿದ್ದರಿಂದ ಘಾಟಿಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿತ್ತು. ಬಸ್ ಸಿಲುಕಿಕೊಂಡಿದ್ದರಿಂದ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿದ್ದರು.

ಘಾಟಿಯ ತಿರುವುಗಳಲ್ಲಿ ಬಸ್ ಚಲಾಯಿಸಲು ಚಾಲಕರಿಗೆ ಸೂಕ್ತ ಅನುಭವ ಇರಬೇಕು. ಅಲ್ಲದೆ, ಇಂತಹ ಕಡಿದಾದ ತಿರುವುಗಳಲ್ಲಿ ಸಂಚರಿಸಲು ಅನುಕೂಲವಾಗುವಂತೆ ಕಡಿಮೆ ಉದ್ದದ ಬಸ್ಸುಗಳನ್ನು ನಿಯೋಜಿಸಬೇಕು ಎಂಬ ಅಭಿಪ್ರಾಯವನ್ನು ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ.

Related posts

ಮೈಸೂರಿನಲ್ಲಿ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ : ಕಾಮುಕ ಕಾರ್ತಿಕ್‌ಗೆ ಗಲ್ಲು ಶಿಕ್ಷೆ

JanaNota Editor

ಪಾಕಿಸ್ತಾನದಲ್ಲಿ ಭೀಕರ ಆತ್ಮಾಹುತಿ ದಾಳಿ, ಪೊಲೀಸ್ ಚೆಕ್‌ಪೋಸ್ಟ್ ಧ್ವಂಸ : 11 ಸಾವು

JanaNota Editor

ರಾಮಮಂದಿರ ದೇಣಿಗೆ ಕಳ್ಳತನ ಆರೋಪ : ಚಂಪತ್ ರಾಯ್, ಅನಿಲ್‌ಗೆ SIT ಕ್ಲೀನ್ ಚಿಟ್

JanaNota Editor