ಜನ ನೋಟ
Headlines

ಕುಡಿಯುವ ನೀರಿನ ವಿಚಾರಕ್ಕೆ ಆರಂಭವಾದ ಜಗಳ : ಕೋಚ್ ಹತ್ಯೆಯಲ್ಲಿ ಅಂತ್ಯ

ಕೊಲಂಬೊ: ಕ್ರಿಕೆಟ್ ಪಂದ್ಯದ ವೇಳೆ ಕುಡಿಯುವ ನೀರಿನ ವಿಚಾರಕ್ಕೆ ಇಬ್ಬರು ಯುವ ಕ್ರಿಕೆಟಿಗರ ನಡುವೆ ಆರಂಭವಾದ ಜಗಳವನ್ನು ಬಿಡಿಸಲು ಮಧ್ಯಪ್ರವೇಶಿಸಿದ 62 ವರ್ಷದ ಕ್ರಿಕೆಟ್ ಕೋಚ್ ಸುಮಿತ್ ಫರ್ನಾಂಡೊ ಮೃತಪಟ್ಟಿರುವ ಘಟನೆ ಕೊಲಂಬೊದಲ್ಲಿ ನಡೆದಿದೆ.

ಆಗಸ್ಟ್ 8ರಂದು ಪಂದ್ಯದ ವೇಳೆ ಇಬ್ಬರು ಶಾಲಾ ಕ್ರಿಕೆಟಿಗರ ನಡುವೆ ಕುಡಿಯುವ ನೀರಿನ ವಿಚಾರವಾಗಿ ವಾಗ್ವಾದ ಆರಂಭವಾಗಿತ್ತು. ಬಳಿಕ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಜಗಳವನ್ನು ಶಾಂತಗೊಳಿಸಲು ಕೋಚ್ ಸುಮಿತ್ ಫರ್ನಾಂಡೊ ಮಧ್ಯಪ್ರವೇಶಿಸಿದ್ದರು.

ಈ ವೇಳೆ 17 ವರ್ಷದ ಶಾಲಾ ಕ್ರಿಕೆಟಿಗನೊಬ್ಬ ಕೋಚ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಫರ್ನಾಂಡೊ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು 17 ವರ್ಷದ ಶಾಲಾ ಕ್ರಿಕೆಟಿಗನನ್ನು ಬಂಧಿಸಿದ್ದಾರೆ. ಬಂಧಿತನನ್ನು ಕೊಲಂಬೊ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಗಸ್ಟ್ 17ರವರೆಗೆ ಬಾಲಾಪರಾಧಿ ಬಂಧನದಲ್ಲಿಡುವಂತೆ ನ್ಯಾಯಾಲಯ ಆದೇಶಿಸಿದೆ.

ಸಾಮಾನ್ಯವಾಗಿ ಆಟದ ವೇಳೆ ಉಂಟಾಗುವ ಸಣ್ಣ ವಿಚಾರವೊಂದು ವಿಕೋಪಕ್ಕೆ ತಿರುಗಿ, ಕ್ರಿಕೆಟ್ ಕಲಿಸುತ್ತಿದ್ದ ಕೋಚ್‌ನ ಸಾವಿಗೆ ಕಾರಣವಾಗಿರುವುದು ಕ್ರೀಡಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ

 

Related posts

ಬಿಜೆಪಿಯಲ್ಲೂ ಇದೆ ಸಿಡಿ ಫ್ಯಾಕ್ಟರಿ, ಸದ್ಯದಲ್ಲೇ ಹೊರ ಬರುತ್ತೆ: ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ

JanaNota Editor

ವೃದ್ಧಾಶ್ರಮದಲ್ಲಿ ಮೃತಪಟ್ಟ ತಂದೆ, ವಿಡಿಯೋ ಕಾಲ್‌ನಲ್ಲಿ ಅಂತ್ಯಕ್ರಿಯೆ ವೀಕ್ಷಿಸಿದ ಮಕ್ಕಳು

JanaNota Editor

ದೀಪಾವಳಿ ನಂತರ 2,000 ರೂ.ಗಿಂತ ಹೆಚ್ಚಿನ ಮೊತ್ತದ ಯುಪಿಐ ವಹಿವಾಟುಗಳಿಗೆ ಶುಲ್ಕಗಳು ಜಾರಿ

JanaNota Editor