ಜನ ನೋಟ
ಕ್ರೈಂ ನ್ಯೂಸ್

ವಿದ್ಯಾನಗರದ ಪಿಡಿಒ ಮನೆ ಕಳ್ಳತನ ಪ್ರಕರಣ; ಆರೋಪಿಯ ಜೊತೆ 1 ಕೋಟಿ ಮೌಲ್ಯದ ವಸ್ತು ವಶ

ಶಿವಮೊಗ್ಗ: ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ಪಿಡಿಒ ನಿವಾಸದ ಬೀಗ ಮುರಿದು ಚಿನ್ನಾಭರಣ, ಬೆಳ್ಳಿ ವಸ್ತು ಹಾಗೂ ನಗದು ಕಳವು ಮಾಡಿದ್ದ ಪ್ರಕರಣವನ್ನು ಕೋಟೆ ಠಾಣೆ ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

2026ರ ಆಗಸ್ಟ್ 28ರಂದು ವಿದ್ಯಾನಗರದ ಪಿಡಿಒ ನಾಗರಾಜ್ ದಂಪತಿಯ ಮನೆಯಲ್ಲಿ ಬಾಗಿಲಿನ ಬೀಗ ಮುರಿದು ಸುಮಾರು 943 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು, 86 ಸಾವಿರ ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ನೀಡಿದ ದೂರಿನ ಆಧಾರದ ಮೇಲೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ತಂಡವು ಹಗರಿಬೊಮ್ಮನಹಳ್ಳಿ ನಿವಾಸಿ ಮೊಹಮ್ಮದ್ ರಫೀಕ್ ಅಲಿಯಾಸ್ ಕರಿಯ ಎಂಬ ಆರೋಪಿಯನ್ನು ಬಂಧಿಸಿದೆ.
ಆರೋಪಿಯಿಂದ 80,92,435 ಮೌಲ್ಯದ 558.099 ಗ್ರಾಂ ಚಿನ್ನಾಭರಣ, 20 ಲಕ್ಷ ನಗದು ಹಾಗೂ 1.85 ಲಕ್ಷ ಮೌಲ್ಯದ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ 1,02,77,435 ಮೌಲ್ಯದ ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

Related posts

ಶಿವಮೊಗ್ಗದಲ್ಲಿ ಪಾಲಿಸಿ ಕ್ಯಾನ್ಸಲ್ ಮಾಡಿದ ಬ್ಯಾಂಕ್‌ಗೆ ಬಿಗ್ ಶಾಕ್! : 20 ಲಕ್ಷ ಪರಿಹಾರಕ್ಕೆ ಆದೇಶ

JanaNota Editor

ಬಾರ್ ಡಾನ್ಸರ್ ಮೇಲಿನ ಹುಚ್ಚು ಪ್ರೀತಿಗೆ 657 ಕೋಟಿ ಸರ್ಕಾರಿ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್

JanaNota Editor

ಬೈಕ್ ನೀಡಿದ ಮಾಲೀಕನಿಗೆ 27 ಸಾವಿರ ದಂಡ

JanaNota Editor