ಜನ ನೋಟ
ಕ್ರೀಡೆ

ಗಿಲ್–ಕೊಹ್ಲಿ ಶತಕದ ಅಬ್ಬರ; ಸರಣಿಯಲ್ಲಿ 1–0 ಮುನ್ನಡೆ

ಗಿಲ್–ಕೊಹ್ಲಿ ಶತಕದ ಅಬ್ಬರ; ಸರಣಿಯಲ್ಲಿ 1–0 ಮುನ್ನಡೆ

ತಿರುವನಂತಪುರಂ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ.

ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 296 ರನ್‌ಗಳ ಸವಾಲಿನ ಗುರಿಯನ್ನು ಭಾರತ ತಂಡ ಕೇವಲ 41.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 300 ರನ್ ಗಳಿಸುವ ಮೂಲಕ ಯಶಸ್ವಿಯಾಗಿ ಬೆನ್ನಟ್ಟಿತು.

ಭಾರತದ ಗೆಲುವಿನಲ್ಲಿ ನಾಯಕ ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಶತಕಗಳು ಪ್ರಮುಖ ಪಾತ್ರ ವಹಿಸಿದವು. ಗಿಲ್ 108 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 110 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 88 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 10 ಬೌಂಡರಿಗಳ ನೆರವಿನಿಂದ ಅಜೇಯ 139 ರನ್ ಸಿಡಿಸಿದರು.

296 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 74 ರನ್‌ಗಳ ಜೊತೆಯಾಟ ನೀಡಿತು. ರೋಹಿತ್ ಶರ್ಮಾ 3 ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ, ಗಿಲ್ ಅವರೊಂದಿಗೆ ಕೈಜೋಡಿಸಿ ಭಾರತದ ರನ್‌ವೇಗವನ್ನು ಹೆಚ್ಚಿಸಿದರು. ಇಬ್ಬರೂ ಯಾವುದೇ ಹಂತದಲ್ಲೂ ರನ್‌ಗತಿ ಕುಸಿಯದಂತೆ ನೋಡಿಕೊಂಡು ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಶತಕ ಸಿಡಿಸಿದ ಬಳಿಕ ನಾಯಕ ಗಿಲ್ ವಿಕೆಟ್ ಒಪ್ಪಿಸಿದರೂ, ರುತುರಾಜ್ ಗಾಯಕ್ವಾಡ್ 19 ಎಸೆತಗಳಲ್ಲಿ ಅಜೇಯ 13 ರನ್ ಗಳಿಸಿ ಗೆಲುವಿನ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು.

ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ.

Related posts

ಜವಾಹರ್ ನವೋದಯ ವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ : ರಾಷ್ಟ್ರಮಟ್ಟಕ್ಕೆ ಐವರು ಆಯ್ಕೆ

JanaNota Editor

ಅ.3, 4ರಂದು ರಾಜ್ಯಮಟ್ಟದ ಶಾಲಾ ಬಾಕ್ಸಿಂಗ್ ಪಂದ್ಯಾವಳಿ

JanaNota Editor

ರೊನಾಲ್ಡೊ–ಜಾರ್ಜಿನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

JanaNota Editor