ಜನ ನೋಟ
ಶಿವಮೊಗ್ಗ

ಶಿವಮೊಗ್ಗ : ಪತ್ನಿ ಕೊಲೆ ಪ್ರಕರಣ – ಆರೋಪಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ: ಪತ್ನಿಯನ್ನು ಚಾಕುವಿನಿಂದ ಇರಿದು, ಮಚ್ಚಿನಿಂದ ತಲೆಗೆ ಹೊಡೆದು ಹಾಗೂ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹2.10 ಲಕ್ಷ ದಂಡ ವಿಧಿಸಿದೆ.

ಟಿಪ್ಪುನಗರ ನಿವಾಸಿ ಅಬ್ದುಲ್ ಶೊಯೆಬ್ (26) ಶಿಕ್ಷೆಗೆ ಗುರಿಯಾದ ಆರೋಪಿ.

ಅಬ್ದುಲ್ ಶೊಯೆಬ್ ಅವರು ಕೌಸರ್ ಫಿಜಾ (20) ಅವರನ್ನು ಪ್ರೀತಿಸಿ ವಿವಾಹವಾಗಿದ್ದು, ದಂಪತಿಗೆ ಒಂದೂವರೆ ವರ್ಷದ ಮಗುವಿತ್ತು. ದಾಂಪತ್ಯ ವಿಚಾರದಲ್ಲಿ ಕೌಸರ್ ಫಿಜಾಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಆರೋಪಿಯು, 2021ರ ಅಕ್ಟೋಬರ್ 16ರಂದು ಬಾಡಿಗೆ ಮನೆ ನೋಡಲು ಹೋಗೋಣ ಎಂದು ನಂಬಿಸಿ ಕಾರಿನಲ್ಲಿ ಶಿವಮೊಗ್ಗಕ್ಕೆ ಕರೆತಂದಿದ್ದಾನೆ ಎಂದು ಆರೋಪಿಸಲಾಗಿತ್ತು.

ನಂತರ ಹಾಳೂರು–ಅನುಪಿನಕಟ್ಟೆ ರಸ್ತೆಯ ಹೊನ್ನಪ್ಪ ಲೇಔಟ್‌ಗೆ ಕರೆದೊಯ್ದು ಸಂಜೆ 5.15ರಿಂದ 5.45ರ ನಡುವೆ ಗಲಾಟೆ ಮಾಡಿ ಚಾಕುವಿನಿಂದ ಇರಿದು, ಮಚ್ಚಿನಿಂದ ತಲೆಗೆ ಹೊಡೆದು ಹಾಗೂ ಕಲ್ಲಿನಿಂದ ಮುಖ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.341/2021ರಡಿ ಕಲಂ 498(ಎ), 302 ಐಪಿಸಿ ಅಡಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಹಾಗೂ ಅಂದಿನ ತುಂಗಾನಗರ ಠಾಣೆ ಪಿಐ ದೀಪಕ್ ಎಂ.ಎಸ್. ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ವಿಚಾರಣೆ ವೇಳೆ ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಪಿ.ಓ. ಪುಷ್ಪಾ ವಾದ ಮಂಡಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ಸೆ.23, 2026ರಂದು ಕಲಂ 498(ಎ) ಮತ್ತು 302ರಡಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹2,10,000 ದಂಡ ವಿಧಿಸಿ ಆದೇಶಿಸಿದ್ದಾರೆ.

ಇದೇ ವೇಳೆ, ನೊಂದವರ ಕುಟುಂಬಕ್ಕೆ ₹2,05,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

Related posts

ಸಿ.ಎಸ್. ಷಡಾಕ್ಷರಿ ಭಾಷಣಕ್ಕೆ ಮಂತ್ರಮುಗ್ಧರಾದ ಜನತೆ : ಸ್ವದೇಶಿ ಮಂತ್ರಕ್ಕೆ ಸಾಕ್ಷಿಯಾದ ಶಿವಮೊಗ್ಗ

JanaNota Editor

ಅ.8, 9ರಂದು ನೀನಾಸಂ ನಾಟಕೋತ್ಸವ

JanaNota Editor

ಸ್ಟೋನ್ ಕ್ರಷರ್ ವಿವಾದದಲ್ಲಿ ಘರ್ಷಣೆ : ಬಿಜೆಪಿ ಮಾಜಿ ಶಾಸಕ ಅತರ್ ಸಿಂಗ್ ಭಡಾನಾ ಹತ್ಯೆ

JanaNota Editor