ಜನ ನೋಟ
ರಾಜ್ಯ

ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ನಟ ದರ್ಶನ್ ಅವರಿಗೆ ಹೈಕೋರ್ಟ್ನಲ್ಲಿ ತೀವ್ರ ಹಿನ್ನಡೆ ಆಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೋಷ್ ರಾವ್ ಮಾಫಿ ಸಾಕ್ಷಿಯಾಲು 59ನೇ ಸಿಸಿಹೆಚ್ ಕೋರ್ಟ್ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. 

ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕ್ರಾಸ್ ಎಗ್ಸಾಮಿನೇಷನ್ ವೇಳೆ ಪ್ರದೋಷ್ ಅವರನ್ನು ಪ್ರಶ್ನಿಸುವ ಹಕ್ಕಿದೆ. ಹೀಗಾಗಿ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪವಿಲ್ಲ ಎಂದು ನ್ಯಾ.ವಿ. ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.

ಪ್ರದೋಷ್ ಪರ ಹಿರಿಯ ವಕೀಲ ಕೆ. ದಿವಾಕರ್ ವಾದ ಮಾಡಿದ್ದಾರೆ. ‘ದರ್ಶನ್ ಪರ ವಕೀಲರು ವಿಚಾರಣೆಯನ್ನು ವಿಳಂಬಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಜಾಮೀನು ರದ್ದುಪಡಿಸಿದಾಗ ನಾವೂ ವಾದಿಸಿದ್ದೆವು. ನಿಮ್ಮ ತಪ್ಪಿಲ್ಲದಿದ್ರೆ ಅಪ್ರೂವರ್ ಆಗಿ ಎಂದು ನ್ಯಾಯಮೂರ್ತಿಗಳು ಹೇಳಿದ್ದರು.

ಅಪ್ರೂವರ್ ಅರ್ಜಿ ಸಲ್ಲಿಸಿದ್ದರೂ ಒಂದಲ್ಲಒಂದು ತಕರಾರು ಸಲ್ಲಿಸುತ್ತಿದ್ದಾರೆ. ಜೈಲು ಕೈಪಿಡಿಯಲ್ಲಿ ಅವಕಾಶವಿರುವಂತೆ ಪ್ರದೋಷ್ ದೂರವಾಣಿ ಮೂಲಕ ಮಾತನಾಡಿದ್ದಾರೆ’ ಎಂದು ಪ್ರದೋಷ್ ವಕೀಲರು ವಾದಿಸಿದ್ದಾರೆ.

ನಾನು ಅಪ್ರೂವರ್ ಆಗ್ತೀನಿ ಅಂತ ದೂರವಾಣಿಯಲ್ಲಿ ಮಾತನಾಡಿದ್ದರೂ ತಪ್ಪೇನು? ಗಂಡ ಹೆಂಡತಿಗೆ ಅಭಿಪ್ರಾಯ ಕೇಳಿದರೆ ತಪ್ಪೇನಿದೆ? ಬೇರೆಯವರ ಚಿತಾವಣೆ ದಾಖಲೆ ಇದ್ದರೆ ಅದು ಬೇರೆ ವಿಚಾರ’ ಎಂದು ಜಡ್ಜ್ ಅಭಿಪ್ರಾಯಪಟ್ಟಿದ್ದಾರೆ.

10ನೇ ಆರೋಪಿ ವಿನಯ್ ಸಹ ಮಾಫಿ ಸಾಕ್ಷಿಗೆ ಅರ್ಜಿ ಸಲ್ಲಿಸಿದ್ದಾನೆ. ಅವನ ಅರ್ಜಿ ಪರಿಗಣಿಸದೇ ಪ್ರದೋಷ್ ಅರ್ಜಿ ಪರಿಗಣಿಸಿದ್ದಾರೆ ಎಂದು ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಾಡಿದರು. ‘ಅದನ್ನು 10ನೇ ಆರೋಪಿ ಹೇಳಬೇಕು. ನೀವು ವಾದಿಸುವಂತಿಲ್ಲ’ ಎಂದು ಜಡ್ಜ್ ಹೇಳಿದರು.

 

Related posts

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ..!

JanaNota Editor

‘ವ್ಯವಸ್ಥಿತ ಸಂಚು ರೂಪಿಸಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ’ : ಮಾಜಿ ಸಿಎಂ ಯಡಿಯೂರಪ್ಪ

JanaNota Editor

ಮೈಸೂರು ದಸರಾ ಉದ್ಘಾಟನೆಗೆ ಕೊಪ್ಪಳದ ಗವಿಮಠ ಸ್ವಾಮೀಜಿಗೆ ಅಧಿಕೃತ ಆಹ್ವಾನ

JanaNota Editor