ಜನ ನೋಟ
ಶಿವಮೊಗ್ಗ

ಶಿವಮೊಗ್ಗಕ್ಕೆ ಕಿಯಾ ಸೊರೆಂಟೊ ಎಂಟ್ರಿ : ಸೆ.8ರಂದು ಭರ್ಜರಿ ಪ್ರಿ-ಲಾಂಚ್

ಶಿವಮೊಗ್ಗ: ನಗರದ ಝಾನ್ಸಿ ಕಿಯಾ ಶೋರೂಮ್‌ನಲ್ಲಿ ಸೆಪ್ಟೆಂಬರ್‌ 8ರಂದು ಸಂಜೆ 6 ಗಂಟೆಗೆ ಆಲ್-ನ್ಯೂ ಕಿಯಾ ಸೊರೆಂಟೊ ಎಸ್‌ಯುವಿಯ ಪ್ರಿ-ಲಾಂಚ್‌ ಕಾರ್ಯಕ್ರಮ ಆಯೋಜಿಸಲಾಗಿದೆ.

ಉದ್ಯಮಿ ಕಿಮ್ಮನೆ ಜಯರಾಂ ಹಾಗೂ ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಝಾನ್ಸಿ ಕಿಯಾ ಶೋರೂಮ್‌ನ ಸಿಎಕ್ಸ್‌ ಮ್ಯಾನೇಜರ್‌ ಎಸ್‌.ಕೆ. ದೀಪಕ್, ಕಿಯಾ ಸೊರೆಂಟೊ ಜಾಗತಿಕ ಮಾದರಿಯಾಗಿದ್ದು, ಏಳು ಸೀಟರ್‌ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು. ಹೈಬ್ರಿಡ್‌ ತಂತ್ರಜ್ಞಾನ ಹೊಂದಿರುವ ಈ ವಾಹನವು ಸ್ವಯಂಚಾಲಿತವಾಗಿ ಚಾರ್ಜ್‌ ಆಗುವ ವ್ಯವಸ್ಥೆಯನ್ನು ಒಳಗೊಂಡಿದೆ ಎಂದರು.

ಝಾನ್ಸಿ ಕಿಯಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಭಾಷ್‌ ಬಿ.ಆರ್. ಅವರ ನೇತೃತ್ವದಲ್ಲಿ ಕಳೆದ ಐದು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಸೆ.8ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕಿಯಾ ಇಂಡಿಯಾದ ಎಎಸ್‌ಎಂ ಸಂತೋಷ್‌ ಕುಮಾರ್‌.ಬಿ ಹಾಗೂ ಎಎಫ್‌ಎಸ್‌ಎಂ ಗೌರವ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಆಲ್-ನ್ಯೂ ಕಿಯಾ ಸೊರೆಂಟೊ ಎಸ್‌ಯುವಿ ವೈಭವೋಪೇತ ಇಂಟೀರಿಯರ್‌, ದೃಢವಾದ ರೋಡ್‌ ಪ್ರೆಸೆನ್ಸ್‌ ಹಾಗೂ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಸೇಲ್ಸ್‌ ವಿಭಾಗದ ಜನರಲ್‌ ಮ್ಯಾನೇಜರ್‌ ಸಂತೋಷ್ ತಿಳಿಸಿದರು.

Related posts

ಶಿವಮೊಗ್ಗದಲ್ಲಿ ರಂಗ ದಸರಾ ಸಂಭ್ರಮ: 39 ಕಾರ್ಯಕ್ರಮ, 25 ನಾಟಕಗಳ ಪ್ರದರ್ಶನ

JanaNota Editor

ದೇವಿಯ ಕೃಪೆಯಿಂದ ಚಿನ್ನ ಸಿಕ್ಕಿದೆ ಎಂದು ನಂಬಿಸಿ ₹1.3 ಕೋಟಿ ವಂಚನೆ

JanaNota Editor

ಜನರ ಮತವನ್ನೇ ಕಳ್ಳತನ ಮಾಡಲು ಬಿಜೆಪಿ ಮುಂದಾಗಿದೆ : ಮಂಜುನಾಥ್ ಭಂಡಾರಿ

JanaNota Editor