ಜನ ನೋಟ
ಶಿವಮೊಗ್ಗ

ಮೊದಲ ಬಾರಿ ಸಿಗ್ನಲ್ ಜಂಪ್ ಗೆ 3 ಸಾವಿರ, ಮರುಕಳಿಸಿದರೆ 5 ಸಾವಿರ ಫೈನ್: ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಲು ಸರ್ಕಾರ ಪ್ಲಾನ್

ಬೆಂಗಳೂರು: ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಸಂಚಾರ ನಿಯಮ ಉಲ್ಲಂಘನೆಗಳಿಗೆ ವಿಧಿಸುವ ದಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಸಾರಿಗೆ ಇಲಾಖೆ ಮತ್ತು ಗೃಹ ಇಲಾಖೆ ನಡುವೆ ಚರ್ಚೆ ನಡೆದಿದೆ.

ಸಾರಿಗೆ ಇಲಾಖೆ ಮತ್ತು ಗೃಹ ಇಲಾಖೆಯ ಜಂಟಿ ಸಭೆಯಲ್ಲಿ, ಸಂಚಾರ ನಿಯಮ ಉಲ್ಲಂಘನೆಗಳಿಗೆ ಹೆಚ್ಚಿನ ದಂಡ ವಿಧಿಸುವ ಕುರಿತು ಚರ್ಚಿಸಲಾಗಿದೆ. ಸಚಿವ ಭೈರತಿ ಸುರೇಶ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಭೆ ನಡೆದಿದ್ದು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಂಚಾರ ನಿಯಮಗಳ ಉಲ್ಲಂಘನೆಯೂ ಪ್ರಮುಖ ಕಾರಣವಾಗಿರುವ ಹಿನ್ನೆಲೆಯಲ್ಲಿ ದಂಡ ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿದೆ.

ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ, ಒನ್‌ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ, ಫುಟ್‌ಪಾತ್ ಮೇಲೆ ಚಾಲನೆ, ಅನಧಿಕೃತ ಪಾರ್ಕಿಂಗ್, ನೋ ಪಾರ್ಕಿಂಗ್ ಉಲ್ಲಂಘನೆ, ಸಿಗ್ನಲ್ ಜಂಪ್ ಹಾಗೂ ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳಿಗೆ ದಂಡ ಹೆಚ್ಚಿಸುವ ಪ್ರಸ್ತಾವನೆ ಚರ್ಚೆಯಲ್ಲಿದೆ.

ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000 ಮರುಕಳಿಸಿದರೆ, ₹5,000, ಒನ್‌ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ. ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000 ಮರುಕಳಿಸಿದರೆ, ₹5,000 ರು ಭಾರೀ ದಂಡ ವಿಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

Related posts

ಸೆ. 19: ಮಲೆನಾಡು ಮೆಗಾ ಜಾಬಥಾನ್-2026

JanaNota Editor

ಆ. 13–14 ರಂದು ‘ಚುಂಚಾದ್ರಿ ಕಪ್–2026’ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

JanaNota Editor

ಸಾಗರ : ಆಯುಧ ಪೂಜೆ ದಿನದಂದು ಹೊಸ ಕಾರು ಖರೀದಿ ಸಂಭ್ರಮ ಕ್ಷಣದಲ್ಲಿ ಮಾಯ; ಶೋರೂಮ್‌ನಿಂದ ನೇರವಾಗಿ ರಸ್ತೆಗೆ ನುಗ್ಗಿದ ಕಾರು, ಇಬ್ಬರಿಗೆ ಗಾಯ

JanaNota Editor