ಜನ ನೋಟ
ರಾಜ್ಯ

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ: 16 ಗಂಟೆಯಲ್ಲಿ ಬೆಂಗಳೂರು ಟು ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು – ಟಿಕೆಟ್ ದರ ಎಷ್ಟು?

ಬೆಂಗಳೂರು:  ಅತ್ಯಾಧುನಿಕ ಸೌಲಭ್ಯ, ವಿಮಾನದಂತಹ ಆರಾಮದಾಯಕ ಅನುಭವ ನೀಡಲು ಸಜ್ಜಾಗಿರುವ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲುಗಳು ಶೀಘ್ರದಲ್ಲೇ ಹಳಿಗೆ ಇಳಿಯಲಿವೆ. ಅದರಲ್ಲೂ ಬೆಂಗಳೂರು ಹಾಗೂ ಮುಂಬೈ ನಡುವಿನ ಪ್ರಯಾಣಿಕರಿಗೆ ಈ ರೈಲು ಸಂಚಾರ ಕ್ರಾಂತಿಕಾರಿ ಬದಲಾವಣೆ ತರಲಿದೆ.

ಅಷ್ಟಕ್ಕೂ ಈ ರೈಲು ಯಾವಾಗ ಹೊರಡುತ್ತದೆ? ತಲುಪುವ ಸಮಯವೇನು? ಯಾವೆಲ್ಲ ನಿಲ್ದಾಣಗಳಲ್ಲಿ ನಿಲ್ಲುತ್ತದೆ? ಟಿಕೆಟ್ ದರ ಎಷ್ಟು ನಿಗದಿಯಾಗಬಹುದು? ನಿಮ್ಮೆಲ್ಲಾ ಕುತೂಹಲಕ್ಕೆ ಉತ್ತರ ಇಲ್ಲಿದೆ:

ಬೆಂಗಳೂರು – ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು

ಇದೇ ನವೆಂಬರ್ 1 ರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು / SMVT ಬೆಂಗಳೂರು ಮತ್ತು ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಸಂಚರಿಸಲಿದ್ದು, ಸುಮಾರು 1,000 ಕಿ.ಮೀ ದೂರವನ್ನು 16 ಗಂಟೆಗಳಲ್ಲಿ ಕ್ರಮಿಸಲಿದೆ. ಈ ಮೂಲಕ ಇದು ಸಾಮಾನ್ಯ ರೈಲುಗಳಿಗಿಂತ (ಉದಾಹರಣೆಗೆ ಉದ್ಯಾನ್ ಎಕ್ಸ್‌ಪ್ರೆಸ್) ಸುಮಾರು 5 ರಿಂದ 6 ಗಂಟೆಗಳ ಪ್ರಯಾಣದ ಸಮಯವನ್ನು ಉಳಿಸಲಿದೆ.

ಅದರಂತೆ, ಸೋಮವಾರ ಹೊರತುಪಡಿಸಿ ರೈಲು ಸಂಖ್ಯೆ 27652 ಬೆಂಗಳೂರಿನಿಂದ ರಾತ್ರಿ 10:00 ಕ್ಕೆ ಹೊರಟು, ಮರುದಿನ ಮಧ್ಯಾಹ್ನ 1:50 ಕ್ಕೆ ಮುಂಬೈ ತಲುಪಲಿದೆ. ರೈಲು ಸಂಖ್ಯೆ 27651 ಮಂಗಳವಾರ ಹೊರತುಪಡಿಸಿ ಮುಂಬೈನಿಂದ ರಾತ್ರಿ 10:30 ಕ್ಕೆ ಹೊರಟು, ಮರುದಿನ ಮಧ್ಯಾಹ್ನ 2:50 ಕ್ಕೆ ಬೆಂಗಳೂರು ತಲುಪಲಿದೆ. ಇನ್ನು ಮಾರ್ಗ ಮಧ್ಯ ಕಲ್ಯಾಣ್, ಪುಣೆ, ಸೋಲಾಪುರ, ಕಲಬುರಗಿ, ರಾಯಚೂರು, ಗುಂತಕಲ್ ಮತ್ತು ಅನಂತಪುರದಂತಹ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಹಾಗಾದ್ರೆ, ಅಂದಾಜು ರೇಟ್ ಎಷ್ಟು?

ರೈಲ್ವೆಯ ಮೂಲ ದರದ ಲೆಕ್ಕಾಚಾರದ ಪ್ರಕಾರ ಅಂದಾಜು ಟಿಕೆಟ್ ದರಗಳು: AC 3-Tier (3A): ₹2,684 ರಿಂದ ₹2,750, AC 2-Tier (2A): ₹3,466 ರಿಂದ ₹3,550, First AC (1A): ₹4,250 ರಿಂದ ₹4,350 ಇರಬಹುದು ಎನ್ನಲಾಗಿದೆ. ಆದರೆ, ಊಟ ಹಾಗೂ ಜಿಎಸ್‌ಟಿ ಸೇರಿ ಬದಲಾಗಬಹುದು.

ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಮುಖ ವೈಶಿಷ್ಟ್ಯಗಳು

  • RAC ಟಿಕೆಟ್‌ಗಳಿಲ್ಲ: ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ Reservation Against Cancellation (RAC) ಸೌಲಭ್ಯ ಇರುವುದಿಲ್ಲ. ಕೇವಲ ಕನ್ಫರ್ಮ್ ಆದ ಸೀಟುಗಳನ್ನು ಮಾತ್ರ ನೀಡಲಾಗುತ್ತದೆ.
  • ವೇಗ ಮತ್ತು ಸುರಕ್ಷತೆ: ಗರಿಷ್ಠ 160 ಕಿಮೀ/ಗಂಟೆ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಸುರಕ್ಷತೆಗಾಗಿ ಸ್ವಯಂಚಾಲಿತ ಕವಚ್ ತಂತ್ರಜ್ಞಾನ ಅಳವಡಿಸಲಾಗಿದೆ.
  • ಆಧುನಿಕ ಸೌಕರ್ಯಗಳು: ಸುಧಾರಿತ ವೈ-ಫೈ, ಮಾಡ್ಯುಲರ್ ಬರ್ತ್‌ಗಳು, ಪ್ರತಿ ಸೀಟಿಗೂ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಬಯೋ-ವ್ಯಾಕ್ಯೂಮ್ ಶೌಚಾಲಯಗಳನ್ನು ಅಳವಡಿಸಲಾಗಿದೆ.
  • ವಿಶೇಷ ಕೋಟಾ: ಹಿರಿಯ ನಾಗರಿಕರು, 45 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಕೆಳಭಾಗದ ಬರ್ತ್‌ಗಳನ್ನು ಕಾಯ್ದಿರಿಸಲು ವಿಶೇಷ ಕೋಟಾ ಇರಲಿದೆ.

Related posts

ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

JanaNota Editor

ಗೋಡ್ಸೆಯನ್ನು ದೇಶದ ಮೊದಲ ಭಯೋತ್ಪಾದಕ ಎಂದು ಬಿಜೆಪಿ ಘೋಷಿಸಲಿ: ಹರಿಪ್ರಸಾದ್ ಸವಾಲು

JanaNota Editor

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ..!

JanaNota Editor