ಜನ ನೋಟ
ಶಿವಮೊಗ್ಗ

ಆಗುಂಬೆ ಘಾಟ್‌ಗೆ ಬಂತು ಬಿಗ್ ಬಜೆಟ್ : ₹42.75 ಕೋಟಿ ಅನುದಾನ

₹42.75 ಕೋಟಿಯಲ್ಲಿ ರಸ್ತೆ ಅಭಿವೃದ್ಧಿ

ಕರಾವಳಿ–ಮಲೆನಾಡು–ಉತ್ತರ ಕರ್ನಾಟಕ ಸಂಪರ್ಕದ ಪ್ರಮುಖ ರಸ್ತೆಯಾಗಿರುವ ರಾಷ್ಟ್ರೀಯ ಹೆದ್ದಾರಿ 169ಎಯ ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಅನುದಾನ ಬಿಡುಗಡೆಯಾಗಿದೆ.

ಆಗುಂಬೆಯಿಂದ ಹೆಬ್ರಿ ಪೇಟೆವರೆಗೆ ಕಾಂಕ್ರೀಟ್ ತಡೆಗೋಡೆ ಸೇರಿದಂತೆ ರಸ್ತೆ ಅಭಿವೃದ್ಧಿ, ಪರ್ಕಳದಿಂದ ಕರಾವಳಿ ಜಂಕ್ಷನ್‌ವರೆಗೆ ಆಯ್ದ ಭಾಗಗಳ ರಸ್ತೆ ಅಭಿವೃದ್ಧಿಗೆ ₹42.75 ಕೋಟಿ ಅನುದಾನ ಮಂಜೂರಾಗಿದೆ.

ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ತಕ್ಷಣ ಕೈಗೆತ್ತಿಕೊಳ್ಳಲಿದೆ ಎಂದು ಸಂಸದರ ಕಚೇರಿ ತಿಳಿಸಿದೆ.

ಅನುದಾನ ಬಿಡುಗಡೆಗೆ ಕ್ರಮವಹಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿನಂದನೆ ಸಲ್ಲಿಸಿದ್ದಾರೆ.

Related posts

ಶಿವಮೊಗ್ಗ : ಎಸ್‌ಐಆರ್ ಅಕ್ರಮ ಖಂಡಿಸಿ ಕಪ್ಪು ಬಾವುಟ ಪ್ರದರ್ಶನ : ರೈಲ್ವೆ ಸಚಿವರ ಕಾರಿಗೆ ಮುತ್ತಿಗೆ

JanaNota Editor

ಪೌರ ಕಾರ್ಮಿಕರು ಆರೋಗ್ಯ ಸಂರಕ್ಷಕರು

JanaNota Editor

ಜೆಪಿಎನ್ ರಸ್ತೆ, ಜೈಲ್ ರಸ್ತೆಯಲ್ಲಿ ಸಂಚರಿಸುವ ಸಿಟಿಬಸ್ ಮಾರ್ಗ ಬದಲಾವಣೆ

JanaNota Editor